ಆ್ಯಪ್ನಗರ

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

ಅಗಸಗಿ/ಬೆಳಗಾವಿ: ಎಮ್ಮೆ ಮೇಯಿಸುವ ಕ್ಷುಲ್ಲಕ ವಿಷಯವಾಗಿ ...

Vijaya Karnataka 29 Jun 2019, 5:00 am
ಅಗಸಗಿ/ಬೆಳಗಾವಿ: ಎಮ್ಮೆ ಮೇಯಿಸುವ ಕ್ಷುಲ್ಲಕ ವಿಷಯವಾಗಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ವ್ಯಕ್ತಿಯೋರ್ವನನ್ನು ಗುರುವಾರ ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರ ವಿರುದ್ಧ ದೂರು ದಾಖಲಾಗಿದೆ.
Vijaya Karnataka Web BLG-2806-2-52-28SIDRAYI NAYK


ಮುತ್ಯಾನಟ್ಟಿ ಗ್ರಾಮದ ಸಿದ್ರಾಯಿ ಕಣ್ಣಪ್ಪ ನಾಯಿಕ್‌(30) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಕಣ್ಣಪ್ಪ ಯಲ್ಲಪ್ಪ ನಾಯಿಕ್‌, ಯಲ್ಲಪ್ಪ ಯಲ್ಲಪ್ಪ ನಾಯಿಕ್‌, ಸತ್ಯವ್ವ ಯಲ್ಲಪ್ಪ ನಾಯಿಕ್‌ ಮತ್ತು ಫಕೀರಪ್ಪ ಯಲ್ಲಪ್ಪ ನಾಯಿಕ್‌ ವಿರುದ್ಧ ದೂರು ದಾಖಲಾಗಿದೆ. ಜಮೀನು ವಿಷಯವಾಗಿ ಎರಡು ಕುಟುಂಬಗಳ ನಡುವೆ ವಿವಾದ ಇತ್ತು. ಸಿದ್ರಾಯಿ ನಾಯಿಕ್‌ ಅವರ ಮಾವಿನ ತೋಟದ ಜಮೀನಿನಲ್ಲಿ ಆರೋಪಿತ ಕುಟುಂಬದವರು ದನ ಮೇಯಿಸುತ್ತಿದ್ದರು. ಇದನ್ನು ವಿರೋಧಿಸಿದ ಸಿದ್ರಾಯಿ ನಾಯಿಕ್‌ ಜತೆಗೆ ಗುರುವಾರ ಮಧ್ಯಾಹ್ನ ವಾಗ್ವಾದ ನಡೆದಿತ್ತು. ಇದೇ ಕಾರಣಕ್ಕೆ ಗುರುವಾರ ಮಧ್ಯರಾತ್ರಿ ಸಿದ್ರಾಯಿಯನ್ನು ಹುಡುಕಿಕೊಂಡ ಬಂದ ಆರೋಪಿತರು ಗ್ರಾಮದ ಚವಾಟ್‌ಗಲ್ಲಿ ಬಳಿ ಮನೆ ಮುಂದೆ ನಿಂತಿದ್ದವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತನ ಸಹೋದರ ಕಾಕತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕಾಕತಿ ಪಿಐ ಶ್ರೀಶೈಲ್‌ ಕೌಜಲಗಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ