ಆ್ಯಪ್ನಗರ

ಹಂದಿಗುಂದದಲ್ಲಿಇಂದಿನಿಂದ ‘ನಮ್ಮೂರ ಜಾತ್ರೆ’

ಪಾಲಬಾವಿ: ರಾಯಬಾಗ ತಾಲೂಕಿನ ಹಂದಿಗುಂದದ ಶ್ರೀ ಸಿದ್ಧೇಶ್ವರ ಮಹಾಶಿವಯೋಗಿಗಳ ...

Vijaya Karnataka 4 Feb 2020, 5:00 am
ಪಾಲಬಾವಿ: ರಾಯಬಾಗ ತಾಲೂಕಿನ ಹಂದಿಗುಂದದ ಶ್ರೀ ಸಿದ್ಧೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ 'ನಮ್ಮೂರ ಜಾತ್ರೆ' ನಿಮಿತ್ತ ಫೆ. 8ರವರೆಗೆ ನಾನಾ ಕಾರ್ಯಕ್ರಮಗಳು ಜರುಗಲಿವೆ.
Vijaya Karnataka Web nammura jatre from today in handigunda
ಹಂದಿಗುಂದದಲ್ಲಿಇಂದಿನಿಂದ ‘ನಮ್ಮೂರ ಜಾತ್ರೆ’


ಫೆ.4ರಿಂದ 8ರವರೆಗೆ ಬೆಳಗಾವಿಯ ಶ್ರೀ ಅಡವಯ್ಯ ಸಂಗಮೇಶ್ವರಮಠ ಅವರಿಂದ ಶ್ರೀ ಸಿದ್ಧೇಶ್ವರ ಶಿವಯೋಗಿಗಳ ಶಿವಯೋಗ ಸಮಾಧಿಗೆ ಭಾವಪೂಜೆ. 4ರಂದು ಬೆಳಗ್ಗೆ 9ಕ್ಕೆ ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳಿಂದ ಷಟ್‌ಸ್ಥಳ ಧ್ವಜಾರೋಹಣ. 6ರಂದು ಬೆಳಗ್ಗೆ 8ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ. 7ರಂದು ಬೆಳಗ್ಗೆ 10ಕ್ಕೆ ಗ್ರಾಮೀಣ ಸಂಸ್ಕೃತಿ ಪರಿಚಯಿಸುವ ಜನಪದ ಜಾತ್ರೆ, ಗೌರವ ಸನ್ಮಾನ, ಗ್ರಂಥ ಬಿಡುಗಡೆ ಕಾರ್ಯಕ್ರಮಗಳು ನಡೆಯುವವು.

ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಬೆಲ್ಲದಬಾಗೇವಾಡಿ ಮಹಾಂತೇಶ್ವರ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮಿಗಳು, ಬೆಂಡವಾಡ ರೇವಣಸಿದ್ಧೇಶ್ವರ ಮಠದ ಶ್ರೀ ಗುರುಸಿದ್ಧ ಸ್ವಾಮಿಗಳು, ಮರೇಗುದ್ದಿ ಅಡವಿಸಿದ್ಧೇಶ್ವರ ಮಠದ ಶ್ರೀ ಗುರುಪಾದ ಸ್ವಾಮಿಗಳು, ತೇರದಾಳ ಹಿರೇಮಠದ ಶ್ರೀ ಬಾಲಗಂಗಾಧರ ದೇವರು ನೇತೃತ್ವ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಮಹಾಂತೇಶ ಕೌಜಲಗಿ, ಪಿ. ರಾಜೀವ, ಮಹಾಂತೇಶ ದೊಡಗೌಡರ, ಯುವ ಧುರೀಣ ಪ್ರಣಯ ಪಾಟೀಲ ಭಾಗವಹಿಸುವರು.

ಕೆಎಎಸ್‌ ಅಧಿಕಾರಿಗಳಾದ ಮಾರುತಿ ಬ್ಯಾಕೋಡ, ಮೋಹನಚಂದ ಕಟಗಿ, ಶಿವನಗೌಡ ಬಿರಾದಾರ, ವಿಠ್ಠಲ ಚೌಗುಲಾ ಹಾಗೂ ಶಿವಾನಂದ ಬುಲಬುಲೆ ಅವರನ್ನು ಸನ್ಮಾನಿಸಲಾಗುವುದು.

ಇದೇ ವೇಳೆ ಮಹಾಲಿಂಗಪುರದ ಡಾ. ಅಶೋಕ ನರೋಡೆಯವರು ಬರೆದ 'ಪಾಂಡಿತ್ಯದ ಪರ್ವತ ಡಾ. ಕಲಬುರ್ಗಿ' ಹಾಗೂ 'ರಸಋುಷಿ, ಕುವೆಂಪು ಸಾಹಿತ್ಯ' ಗ್ರಂಥ ಬಿಡುಗಡೆಗೊಳಿಸಲಾಗುವುದು. ಹಂದಿಗುಂದದ ವಕೀಲ ಸುರೇಶ ಹೊಸಪೇಟಿ ಅವರಿಂದ ದಾಸೋಹ ಸೇವೆ ನಡೆಯಲಿದೆ. ರಾತ್ರಿ 9ಕ್ಕೆ ಹಂದಿಗುಂದ ಎಲ್ಲಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು.

ಫೆ.7 ಮತ್ತು 8ರಂದು ಶ್ರೀಮಠದ ಶ್ರೀ ಶಿವಾನಂದ ಸ್ವಾಮಿಗಳ ನೇತೃತ್ವ ಹಾಗೂ ಶ್ರೀ ಸಿದ್ಧೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿರಥೋತ್ಸವ ನೆರವೇರಲಿದೆ. 8ರಂದು ಸಂಜೆ 4ಕ್ಕೆ 'ವಚನೋತ್ಸವ' ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ.

ಸಮಾರೋಪ ಸಮಾರಂಭ
ಫೆ. 8ರಂದು ಸಂಜೆ 7ಕ್ಕೆ ಜಮಖಂಡಿ ಓಲೆಮಠದ ಡಾ. ಚನ್ನಬಸವ ಸ್ವಾಮಿಗಳ ಸಾನ್ನಿಧ್ಯದಲ್ಲಿಸಮಾರೋಪ ಸಮಾರಂಭ ನಡೆಯಲಿದೆ. ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮಿಗಳು, ಚಿಮ್ಮಡ ವಿರಕ್ತಮಠದ ಪ್ರಭುಮಹಾಸ್ವಾಮಿಗಳು, ಬೀಳಗಿ ಕಲ್ಮಠದ ಶ್ರೀ ಗುರುಪಾದ ಶಿವಾಚಾರ್ಯರು, ಮಣಕವಾಡ ದೇವಮಂದಿರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಗಳು, ವಿಜಯಪುರ, ಹುಬ್ಬಳ್ಳಿ ಷಣ್ಮುಕಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮಿಗಳು ನೇತೃತ್ವ ವಹಿಸುವರು. ರಾಯಬಾಗದ ಶಿಕ್ಷಕ ನಾನಪ್ಪ ಶಂಕರಪ್ಪ ಗಡ್ಡಿ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ಶಾಸಕರಾದ ಪಿ.ರಾಜೀವ ಹಾಗೂ ಡಿ.ಎಂ. ಐಹೊಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮುಧೋಳದ ಸಾಹಿತಿ ಹಾಗೂ ವೈದ್ಯ ಡಾ.ಶಿವಾನಂದ ಕುಬಸದ, ನ್ಯಾಯವಾದಿ ಪ್ರಕಾಶ ವಸ್ತ್ರದ, ಮಹಾಲಿಂಗಪುರದ ವೈದ್ಯ ಡಾ. ಎ.ಆರ್‌.ಬೆಳಗಲಿ, ಡಪಳಾಪುರ ವಿದ್ಯಾವಿಹಾರ ಸ್ಕೂಲ್‌ನ ವಿವೇಕ ಡಪಳಾಪುರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತೆ, ಹಂದಿಗುಂದದ ಸುನಂದಾ ಕರಿಗಾರ ಅವರನ್ನು ಸನ್ಮಾನಿಸಲಾಗುವುದು. ಮಹಾಲಿಂಗಪುರದ ಅಶೋಕ ನರೋಡೆಯವರು ರಚಿಸಿದ 'ಶರಣ ಸಾಹಿತ್ಯದ ಅನುಸಂಧಾನ' ಹಾಗೂ 'ಅಥಣಿಯಿಂದ ಅಬುದಾಬಿಗೆ' ಪ್ರವಾಸ ಕಥನ ಗ್ರಂಥಗಳನ್ನು ಬಿಡುಗಡೆಗೊಳಿಸಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ