ಆ್ಯಪ್ನಗರ

23 ದಿನಗಳ ನಂತರ ನರಸಿಂಹವಾಡಿ ದತ್ತ ಮಂದಿರ ದರ್ಶನಕ್ಕೆ ಮುಕ್ತ

ಇಚಲಕರಂಜಿ: ಕೃಷ್ಣಾ ಮತ್ತು ಪಂಚಗಂಗಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ...

Vijaya Karnataka 24 Aug 2019, 5:00 am
ಇಚಲಕರಂಜಿ : ಕೃಷ್ಣಾ ಮತ್ತು ಪಂಚಗಂಗಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಶ್ರೀಕ್ಷೇತ್ರ ನರಸಿಂಹವಾಡಿಯ ಶ್ರೀ ದತ್ತ ಮಂದಿರ 23 ದಿನಗಳ ನಂತರ ದರ್ಶನಕ್ಕೆ ಮುಕ್ತವಾಗಿದೆ.
Vijaya Karnataka Web BEL-23ICH2


ಪ್ರವಾಹದಿಂದಾಗಿ ಶ್ರೀಕ್ಷೇತ್ರ ನರಸಿಂಹವಾಡಿಯ ದತ್ತ ದೇವರಿಗೂ ಹಲವೆಡೆ ಸ್ಥಳಾಂತರ ತಪ್ಪಲಿಲ್ಲ. ಜು.28ರಂದು ದತ್ತ ಮಂದಿರದಲ್ಲಿ ದ್ವಿತೀಯ ಬಾರಿಗೆ ದಕ್ಷಿಣ ದ್ವಾರ ಪೂಜೆ ನಡೆಯಿತು. ಕೊಲ್ಲಾಪುರ, ಸಾಂಗಲಿ, ಸಾತಾರಾ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಪಂಚಗಂಗಾ, ಕೃಷ್ಣಾ ಹಾಗೂ ದೂಧಗಂಗಾ ನದಿಗಳ ಪ್ರವಾಹ ಹೆಚ್ಚಾದಂತೆ ಮುಖ್ಯ ಮಂದಿರದಲ್ಲಿ ಪ್ರವಾಹದ ನೀರು ಹರಿದು ಬಂತು. ಅಂದು ಮೊದಲ ಬಾರಿಗೆ ನಾರಾಯಣಸ್ವಾಮಿ ಮಂದಿರದಲ್ಲಿ ಶ್ರೀಗಳ ಉತ್ಸವಮೂರ್ತಿ ಸ್ಥಳಾಂತರವಾಯಿತು.

ಆ.4ರಂದು ನಾರಾಯಣಸ್ವಾಮಿ ಮಂದಿರದಲ್ಲೂ ನೀರು ಪ್ರವೇಶಿಸುತ್ತಿದ್ದಂತೆ ಟೆಂಬೆಸ್ವಾಮಿ ಮಹಾರಾಜರ ಮಠಕ್ಕೆ ಸ್ಥಳಾಂತರಿಸಲಾಯಿತು. ಅಲ್ಲೂ ಬೆಂಬಿಡದ ಪ್ರವಾಹದಿಂದ ಉತ್ಸವಮೂರ್ತಿಯನ್ನು ದತ್ತ ದೇವರ ಮುಖ್ಯಅರ್ಚಕ ಮುಕುಂದ ಹವಳೆಯವರ ಮನೆಯಲ್ಲಿ ಪ್ರತಿಷ್ಠಾಪಿಸಿ ವಿಧಿವಿಧಾನಗಳನ್ನು ಪ್ರಾರಂಭಿಸಲಾಗಿತ್ತು.

ಅವರ ಮನೆಗೂ ಪ್ರವಾಹದ ನೀರು ಬರುತ್ತಿದ್ದಂತೆ ಗ್ರಾಮದ ಕೊನೆಯ ವಸತಿಯಲ್ಲಿರುವ ಮೇಘಶ್ಯಾಮ ಪೂಜಾರಿಯವರ ಮನೆಗೆ ಸ್ಥಳಾಂತರಿಸಲಾಗಿತ್ತು. ನೀರು ಇಳಿಕೆಯಾಗುತ್ತಿದ್ದಂತೆ ಆ.18ರಂದು ಪುನಃ ನಾರಾಯಣಸ್ವಾಮಿ ಮಂದಿರಕ್ಕೆ ತಂದಿರಿಸಲಾಯಿತು.

ಪ್ರಸ್ತುತ ಪ್ರವಾಹ ಸಂಪೂರ್ಣ ಇಳಿಮುಖವಾಗಿ ದತ್ತ ಮಂದಿರ ಸ್ವಚ್ಛತೆ ನಂತರ ದೇವರ ಮೂರ್ತಿ ಪುನರ್‌ ಪ್ರತಿಷ್ಠಾಪಿಸಿ ಎಂದಿನಂತೆ ಪೂಜೆ ಪುನಸ್ಕಾರಾದಿಗಳನ್ನು ಮುಂದುವರಿಸಿದ್ದು ಭಕ್ತರಿಗೆ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ