ಆ್ಯಪ್ನಗರ

ಖಾನಾಪುರದಲ್ಲಿ ನಳನಳಿಸುತ್ತಿರುವ ಸೃಷ್ಟಿಯ ಸೊಬಗು

ಖಾನಾಪುರ: ಈ ವರ್ಷದ ಸಾಂದರ್ಭಿಕ ವರ್ಷಧಾರೆಗೆ ಸೃಷ್ಟಿಯ ಸೊಬಗು ಇಮ್ಮಡಿಗೊಂಡಿದೆ...

Vijaya Karnataka 20 Jul 2018, 5:00 am
ಖಾನಾಪುರ: ಈ ವರ್ಷದ ಸಾಂದರ್ಭಿಕ ವರ್ಷಧಾರೆಗೆ ಸೃಷ್ಟಿಯ ಸೊಬಗು ಇಮ್ಮಡಿಗೊಂಡಿದೆ. ಖಾನಾಪುರ ತಾಲೂಕಿನ ಎಲ್ಲೆಡೆ ಉತ್ತಮ ಮಳೆಯ ಕಾರಣದಿಂದಾಗಿ ವಾತಾವರಣ ನಯನ ಮನೋಹರವಾಗಿ ಗೋಚರಿಸುತ್ತಿದೆ.
Vijaya Karnataka Web BEL-19KHANAPUR7


ತಾಲೂಕಿನ ಪ್ರಮುಖ ಬೆಳೆಯಾದ ಭತ್ತ ಈಗಾಗಲೇ ಮೊಳಕಾಲೆತ್ತರಕ್ಕೆ ಬೆಳೆದು ನಿಂತಿದ್ದು, ಗದ್ದೆಗಳು ಹಚ್ಚ ಹಸುರಿನಿಂದ ಕಂಗೊಳಿಸುತ್ತಿವೆ. ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ಭತ್ತದ ಗದ್ದೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಪರಿಣಾಮ ಗದ್ದೆಗಳಲ್ಲಿ ಭತ್ತದ ಪೈರು ನಿಧಾನವಾಗಿ ಚಿಗುರೊಡೆಯಲಾರಂಭಿಸಿದೆ. ಮಳೆಗಾಲದ ವೈಭವದಿಂದಾಗಿ ತಾಲೂಕಿನ ಬೆಟ್ಟ ಗುಡ್ಡಗಳಲ್ಲೂ ಹಚ್ಚ ಹಸಿರಿನ ವಾತಾವರಣ ನಿರ್ಮಾಣಗೊಂಡಿದೆ. ತಾಲೂಕಿನ ಕೌಂದಲ್‌, ಲಾಲವಾಡಿ, ನಂದಗಡ, ಹಲಸಿ, ಹಲಗಾ, ನಾಗರಗಾಳಿ, ಲೋಂಡಾ, ಗುಂಜಿ ಮತ್ತಿತರ ಭಾಗದ ಗದ್ದೆಗಳಲ್ಲಿ ಭತ್ತದ ಬೆಳೆ ಉತ್ತಮವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಅಭಾವದಿಂದ ಸತತ ಬರಗಾಲ ಆವರಿಸಿ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಈ ವರ್ಷದ ಮಳೆ ಮತ್ತು ಬೆಳೆ ಆಶಾಭಾವನೆ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ