ಆ್ಯಪ್ನಗರ

ವಿಶೇಷಚೇತನರ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ ್ಯ

ಬೆಳಗಾವಿ : ಜಿಲ್ಲೆಯಲ್ಲಿ 1.5 ಲಕ್ಷ ವಿಶೇಷಚೇತನರಿದ್ದು, ಅನೇಕ ಕಾರಣಗಳಿಂದ ವಿಶೇಷಚೇತನರ ...

Vijaya Karnataka 12 Jun 2019, 5:00 am
ಬೆಳಗಾವಿ : ಜಿಲ್ಲೆಯಲ್ಲಿ 1.5 ಲಕ್ಷ ವಿಶೇಷಚೇತನರಿದ್ದು, ಅನೇಕ ಕಾರಣಗಳಿಂದ ವಿಶೇಷಚೇತನರ ಕಲ್ಯಾಣ ಕಾರ‍್ಯಕ್ರಮಗಳ ಅನುಷ್ಠಾನದಲ್ಲಿ ಉದಾಸೀನತೆ ಕಂಡುಬರುತ್ತಿದೆ. ಅಧಿಕಾರಿಗಳು ವ್ಯಕ್ತಿಗತ ಆಸಕ್ತಿ ಮತ್ತು ಮಾನವೀಯತೆ ಆಧಾರದ ಮೇಲೆ ವಿಶೇಷಚೇತನರ ಕಲ್ಯಾಣಕ್ಕೆ ಪ್ರಯತ್ನಿಸಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್‌. ಬಸವರಾಜು ತಿಳಿಸಿದರು.
Vijaya Karnataka Web BEL-11 LBS 4


ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿಶೇಷಚೇತನರ ಹಕ್ಕುಗಳ ರಕ್ಷ ಣೆ ಮತ್ತು ಶೇ.5 ಆಯವ್ಯಯ ಬಳಕೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು. ''ವಿಶೇಷಚೇತನರ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಯೋಜನೆಗಳನ್ನು ಜಾರಿಗೆ ತರುವುದು ಕೇವಲ ಇಲಾಖೆಯ ಹೊಣೆಗಾರಿಕೆ ಅಲ್ಲ. ಇದು ಪ್ರತಿಯೊಬ್ಬರ ಜವಾಬ್ದಾರಿ. ವಿಶೇಷಚೇತನರಿಗಾಗಿ ಬಳಸಬೇಕಾದ ಶೇ.5 ರಷ್ಟು ಅನುದಾನವನ್ನು ವಿನಾಕಾರಣ ವ್ಯರ್ಥ ಮಾಡದೆ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಬೇಕು'', ಎಂದರು.

ಜಿಪಂ ಸಿಇಒ ಡಾ. ಕೆ.ವಿ.ರಾಜೇಂದ್ರ, ''ವಿಶೇಷಚೇತನರ ಕಲ್ಯಾಣಕ್ಕಾಗಿ ಎಲ್ಲ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳು ಕಡ್ಡಾಯವಾಗಿ ಅನುದಾನ ಮೀಸಲಿಟ್ಟು, ಅದನ್ನು ಸದ್ಬಳಕೆ ಮಾಡಬೇಕು. ಬಹುತೇಕ ಸಂಸ್ಥೆಗಳಲ್ಲಿ ಇನ್ನೂ ಕ್ರಿಯಾಯೋಜನೆ ರೂಪಿಸಬೇಕಿರುವುದರಿಂದ ವಿಶೇಷಚೇತನರಿಗೆ ಅಗತ್ಯವಿರುವ ಕಾರ‍್ಯಕ್ರಮಗಳನ್ನು ರೂಪಿಸಬೇಕು. ಸರಕಾರದ ಕಾರ‍್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಇದನ್ನು ಅರಿತು ಕಾರ್ಯನಿರ್ವಹಿಸಬೇಕು'', ಎಂದರು.

ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಪ್ಪಾಸಾಹೇಬ ನರಟ್ಟಿ, ಡಿಡಿಪಿಐ ಎ.ಬಿ. ಪುಂಡಲೀಕ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷ ಚಿಕಿತ್ಸೆ ಘಟಕ ಆರಂಭಿಸಿ :
''ಜಿಲ್ಲೆಯಲ್ಲಿ 9 ವರ್ಷದ ಒಂದು ಮಗುವಿಗೆ ಇನ್ನೂ ಮಾತನಾಡಲು ಬರುತ್ತಿಲ್ಲ. ಶಿಕ್ಷಣದಿಂದ ವಂಚಿತವಾಗಿರುವುದು ಸೇರಿದಂತೆ ವಿವಿಧ ವಿಶೇಷ ಪ್ರಕರಣಗಳು ಕಂಡು ಬರುತ್ತಿವೆ. ಆದರೆ, ಇಲ್ಲಿನ ಅಧಿಕಾರಿಗಳ ಗಮನಕ್ಕೆ ಏಕೆ ಬಂದಿಲ್ಲ'', ಎಂದು ಆಯುಕ್ತ ವಿ.ಎಸ್‌.ಬಸವರಾಜು ಅಸಮಾಧಾನ ವ್ಯಕ್ತಪಡಿಸಿದರು. ''ಮಾತನಾಡಲು ಬರದ ಮಗುವಿಗೆ ಕೂಡಲೇ ಚಿಕಿತ್ಸೆ ನೀಡಬೇಕು. ವಿಶೇಷಚೇತನ ಮಕ್ಕಳಿಗೆ ತಕ್ಷಣ ಸ್ಪಂದಿಸಿ ಪ್ರಮಾಣಪತ್ರ ಒದಗಿಸಬೇಕು. ವಾರದಲ್ಲಿ ಎರಡು ದಿನ ಜಿಲ್ಲಾಸ್ಪತ್ರೆಯಲ್ಲಿ ಫಿಜಿಯೋಥೆರಪಿ ಸೇವೆ ಆರಂಭಿಸಬೇಕು. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಶೇ.5 ಅನುದಾನ ಲಭ್ಯವಿದ್ದು, ಇದರದಲ್ಲಿ ವಿಶೇಷ ಚಿಕಿತ್ಸಾ ಘಟಕ ಆರಂಭಿಸಿ'', ಎಂದು ಆದೇಶಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ