ಆ್ಯಪ್ನಗರ

ಮತ್ತೆ ನೆರೆ ಭೀತಿ; ರಕ್ಷಣಾ ತಂಡ ನಿಯೋಜನೆ

ಬೆಳಗಾವಿ: ಜಿಲ್ಲೆಯಲ್ಲಿಮತ್ತೆ ನೆರೆ ಆವರಿಸಿದರೆ ತಕ್ಷಣ ರಕ್ಷಣಾ ಕಾರ್ಯ ಕೈಗೊಳ್ಳಲು ...

Vijaya Karnataka 8 Sep 2019, 5:00 am
ಬೆಳಗಾವಿ: ಜಿಲ್ಲೆಯಲ್ಲಿಮತ್ತೆ ನೆರೆ ಆವರಿಸಿದರೆ ತಕ್ಷಣ ರಕ್ಷಣಾ ಕಾರ್ಯ ಕೈಗೊಳ್ಳಲು ರಕ್ಷಣಾ ತಂಡ ನಿಯೋಜಿಸಲಾಗಿದೆ. ಈಗಾಗಲೆ ಪುಣೆಯಿಂದ ಎನ್‌ಡಿಆರ್‌ಎಫ್‌ನ ಮೂರು ತಂಡಗಳು ಜಿಲ್ಲೆಗೆ ಆಗಮಿಸಿವೆ ಎಂದು ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.
Vijaya Karnataka Web neighbors again defense team deployment
ಮತ್ತೆ ನೆರೆ ಭೀತಿ; ರಕ್ಷಣಾ ತಂಡ ನಿಯೋಜನೆ


ಮಳೆ ಇನ್ನೂ ಹಚ್ಚಿದರೆ ಮಾತ್ರ ನೆರೆ ಆವರಿಸುವ ಸಾಧ್ಯತೆ ಇರುವುದರಿಂದ ಎಲ್ಲಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಗೆ ಆಗಮಿಸಿರುವ ಎನ್‌ಡಿಆರ್‌ಎಫ್‌ ತಂಡಗಳನ್ನು ಅಥಣಿ, ಕಾಗವಾಡ ಮತ್ತು ಕುಡಚಿ ಭಾಗಗಳಲ್ಲಿನಿಯೋಜಿಸಲಾಗಿದೆ. ಇದರಲ್ಲಿಒಂದು ತಂಡವನ್ನು ರಾಮದುರ್ಗ ತಾಲೂಕಿಗೆ ಕಳುಹಿಸಿಕೊಡಲಾಗುತ್ತಿದೆ ಜತೆಗೆ ಸ್ಥಳೀಯ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತರಿಗೆ ನೀಡಲಾಗುತ್ತಿರುವ ತಾತ್ಕಾಲಿಕ ಪರಿಹಾರ ಚೆಕ್‌ ವಿತರಣೆಗೆ ಕೆಲ ಭಾಗಗಳಲ್ಲಿವಿನಾಕಾರಣ ಅಡ್ಡಿಪಡಿಸಲಾಗುತ್ತಿದೆ. ಸ್ಥಳೀಯರು ಯಾವುದೇ ಸಮಸ್ಯೆಗಳಿದ್ದರೂ ಇಲಾಖೆ ಗಮನಕ್ಕೆ ತಂದರೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ, ಪರಿಹಾರ ಚೆಕ್‌ ವಿತರಣೆಗೆ ಯಾರೇ ಅಡ್ಡಿಪಡಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ