ಆ್ಯಪ್ನಗರ

ಬಾಂದಾರ, ಕೆರೆಗೆ ನೀರು ತುಂಬಿಸುವ ಯೋಜನೆ ರೈತರಿಗೆ ವರದಾನ

ಹುಕ್ಕೇರಿ: ಬೇಸಿಗೆಯಲ್ಲಿ ನೀರನ ಸಮಸ್ಯೆ ಎದುರಿಸುತ್ತಿರುವ ಹಿರಣ್ಯಕೇಶಿ ನದಿ ತೀರದ ಗ್ರಾಮಗÜಳ ...

Vijaya Karnataka 2 Jul 2019, 5:00 am
ಹುಕ್ಕೇರಿ: ಬೇಸಿಗೆಯಲ್ಲಿ ನೀರನ ಸಮಸ್ಯೆ ಎದುರಿಸುತ್ತಿರುವ ಹಿರಣ್ಯಕೇಶಿ ನದಿ ತೀರದ ಗ್ರಾಮಗಳ ಬಳಿ ನಿರ್ಮಿಸುತ್ತಿರುವ ಬ್ರಿಜ್‌ ಕಂ ಬಾಂದಾರ ಹಾಗೂ ಕರೆಗಳಿಗೆ ನೀರು ತುಂಬಿಸುವ ಯೋಜನೆಗಳು ರೈತರಿಗೆ ವರದಾನವಾಗಲಿವೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
Vijaya Karnataka Web BEL-1 HUKKERI 01


ತಾಲೂಕಿನ ಸುಲ್ತಾನಪುರ ಬಳಿ ಹಿರಣ್ಯಕೇಶಿ ನದಿಗೆ 20 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬ್ರಿಜ್‌ ಕಮ್‌ ಬಾಂದಾರ ಲೋಕಾರ್ಪಣೆ ಹಾಗೂ 2ನೇ ಹಂತದ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ರೈತರ ಬಹುದಿನಗಳ ಬೇಡಿಕೆಯಾಗಿದ್ದ ಸೇತುವೆ ಮಳೆಗಾಲದಲ್ಲಿ ನೀರಿನಿಂದ ಮುಳುಗಿ ರಸ್ತೆ ಸಂಪರ್ಕಕ್ಕೆ ಜನರಿಗೆ ತೊಂದರೆಯಾಗುತ್ತಿತ್ತು. 12ಮೀ. ಅಗಲದ ಸೇತುವೆಯಿಂದ ಜನರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಬಾಂದಾರದಿಂದ 28 ಗೇಟ್‌ ಅಳವಡಿಸಲಾಗಿದೆ 4.5ಮೀ ಎತ್ತರ ನೀರು ಸಂಗ್ರಹವಾಗಲಿದೆ. ಯರನಾಳ ಕೋಚರಿ, ಗೋಟೂರ ಗ್ರಾಮಗಳ ಬಳಿಯೂ ಬ್ರೀಜ್‌ ಕಮ್‌ ಬಾಂದಾರ ನಿರ್ಮಿಸಲಾಗುತ್ತದೆ. ಇದರಿಂದ ವರ್ಷಪೂರ್ತಿ ನೀರು ನಿಂತು ರೈತರಿಗೆ ಅನೂಕೂಲವಾಗಲಿದೆ ಎಂದರು.

ಕೆರೆ ಭರಣಕ್ಕೆ ಶಂಕು ಸ್ಥಾಪನೆ:
ತಾಲೂಕಿನ 11 ಕರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬೆಳವಿ ಗ್ರಾಮದಲ್ಲಿ ಶಾಸಕ ಉಮೇಶ ಕತ್ತಿ ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿಸಿದರು.

ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ವರ್ಷ 22 ಕರೆಗಳಿಗೆ ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸಲಾಯಿತು. ಈ ವರ್ಷ ಕಣಗಲಾ,ಬಾಡವಾಡಿ, ಆಲೂರ ಶಿಡ್ಲಹೊಂಡ, ನೇರ್ಲಿ, ಎಲಿಮುನ್ನೋಳಿ, ಯಾದಗೂಡ, ಬೆಳವಿ, ಶೇಲಾಪುರ, ಶಿರಹಟ್ಟಿ, ಕೆಂಚನಟ್ಟಿ, ಕರಗಾಂವ, ಸೇರಿದಂತೆ 33 ಕೆರೆಗಳಿದ್ದು ಅದರಲ್ಲಿ ಹುಕ್ಕೇರಿ ತಾಲೂಕಿನ 27 ಹಾಗೂ ಚಿಕ್ಕೋಡಿ ತಾಲೂಕಿನ 6 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ತುಂಬಿಸಲಾಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಚಿವ ಶಶಿಕಾಂತ ನಾಯಿಕ, ವಿದ್ಯುತ್‌ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಪ್ಪಾಸಾಹೇಬ ಶಿರಗಕೋಳಿ, ಶಿವನಗೌಡ ಮದವಾಲ, ಶ್ರೀಶೈಲ್‌ ಹಿರೇಮಠ ಬಂಡು ಹತ್ತನೂರೆ, ಜಿಪಂ ಸದಸ್ಯರಾದ ಅನಸೂಯಾ ಮಾಳಗೆ, ಮಹೇಶ ಕುಂಬಾರ ತಾಪಂ ಸದಸ್ಯರಾದ ಬಾಳಾಸಾಹೇಬ ನಾಯಿಕ, ನಿಂಗಪ್ಪ ಪೂಜೇರಿ, ಬಿಜೆಪಿ ಘಟಕಾಧ್ಯಕ್ಷ ಪರಗೌಡ ಪಾಟೀಲ, ನೀರಾವರಿ ಇಲಾಖೆ ಎಸ್‌.ಬಿ. ನಾಯಿಕ, ಸಿ.ಡಿ. ಪಾಟೀಲ, ಆರ್‌. ತಾಳೂರ, ಎಂ.ಎನ್‌. ಮಾಳಗೆ, ಸಾದಿಕ್‌ ಮುಲ್ಲಾ. ಎನ್‌.ಜಿ. ಮಹಾಳಂಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ