ಆ್ಯಪ್ನಗರ

ಸಾಕಲಾಗದೆ ರಕ್ಷಣಾ ಘಟಕಕ್ಕೆ ನವಜಾತ ಶಿಶು ಹಸ್ತಾಂತರ

ವಿಧವೆಯೊಬ್ಬರು ತಮಗೆ ಜನಿಸಿದ ನವಜಾತ ಹೆಣ್ಣುಶಿಶುವನ್ನು ಸ್ವ ಇಚ್ಛೆಯಿಂದ ಬೆಳಗಾವಿಯ ಮಕ್ಕಳ ರಕ್ಷಣಾ ಘಟಕಕ್ಕೆ ಚಿಕ್ಕೋಡಿ ತಾಲೂಕು ವೈದ್ಯಾಧಿಕಾರಿ ...

Vijaya Karnataka 21 Mar 2019, 5:00 am
ಚಿಕ್ಕೋಡಿ: ವಿಧವೆಯೊಬ್ಬರು ತಮಗೆ ಜನಿಸಿದ ನವಜಾತ ಹೆಣ್ಣುಶಿಶುವನ್ನು ಸ್ವ ಇಚ್ಛೆಯಿಂದ ಬೆಳಗಾವಿಯ ಮಕ್ಕಳ ರಕ್ಷಣಾ ಘಟಕಕ್ಕೆ ಚಿಕ್ಕೋಡಿ ತಾಲೂಕು ವೈದ್ಯಾಧಿಕಾರಿ ಎಸ್‌.ಎಸ್‌. ಗಡಾದ ಅವರ ಮೂಲಕ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
Vijaya Karnataka Web BEL-20CKD5


ಸದ್ಯ ಚಿಕ್ಕೋಡಿ ನಿವಾಸಿಯಾಗಿರುವ ಈ ಮಹಿಳೆ ಮಹಾರಾಷ್ಟ್ರದ ಕೊಲ್ಲಾಪುರದ ಕುರಂದರವಾಡದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ದಂಪತಿಗೆ ಈ ಮೊದಲು ಆರು ವರ್ಷದ ಹೆಣ್ಣು ಮಗುವಿತ್ತು. ಎರಡನೇ ಮಗುವಿಗೆ ಗರ್ಭವತಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯ ಪತಿ ಅಕಾಲಿಕವಾಗಿ ನಿಧನಹೊಂದಿದರು. ಸಂತ್ರಸ್ತ ಮಹಿಳೆಗೆ ಅತ್ತೆ, ಮಾವ, ತಂದೆ, ತಾಯಿ ಯಾರೂ ಇಲ್ಲದ ಕಾರಣ ಚಿಕ್ಕೋಡಿಯಲ್ಲಿ ಉಪಜೀವನಕ್ಕೆ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಮಗುವಿನ ಲಾಲನೆ ಪಾಲನೆ ಕಷ್ಟ ಸಾಧ್ಯವೆಂದು ಅರಿತ ಇವರು ಸ್ವ ಇಚ್ಛೆಯಿಂದ ಮಗುವನ್ನು ರಕ್ಷಣಾ ಘಟಕಕ್ಕೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಾರ್ವಜನಿಕ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಎಸ್‌.ಎಸ್‌. ಗಡೆದ, ವೈದ್ಯಾಧಿಕಾರಿ ವಿವೇಕ ಹೊನ್ನಳ್ಳಿ, ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳಾದ ಜಗದೀಶ ಹುಲಕುಂದ, ಬೀರಪ್ಪಾ ಟಾಕಳೆ, ಶುಶ್ರೂಕಿಯರಾದ ಗೀತಾ ಮೂಡ್ಕಣಿ, ಸೀಮಾ ಮೇನೆಜಿಸ್‌, ರತ್ನಾ ಚಂದನ್ನವರ ಉಪಸ್ಥಿತಿಯಲ್ಲಿ ಜಿಲ್ಲಾ ಮಹಿಳಾ ಮತ್ತು ರಕ್ಷ ಣಾ ಘಟಕದ ಕಾನೂನು ಪರಿವೀಕ್ಷ ಣಾಧಿಕಾರಿ ವೈಜುಂಷಾ ಅಡಗೆ ಅವರಿಗೆ ನವಜಾತ ಶಿಶುವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ