ಆ್ಯಪ್ನಗರ

ನಿಪ್ಪಾಣಿ ನಗರಸಭೆ ಅತಂತ್ರ: ಅಧಿಕಾರಕ್ಕಾಗಿ ನಾನಾ ತಂತ್ರ

ನಿಪ್ಪಾಣಿ: ಸ್ಥಳೀಯ ನಗರಸಭೆ ಚುನಾವಣೆ ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಒಟ್ಟು 31 ...

Vijaya Karnataka 4 Sep 2018, 5:00 am
ನಿಪ್ಪಾಣಿ: ಸ್ಥಳೀಯ ನಗರಸಭೆ ಚುನಾವಣೆ ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಒಟ್ಟು 31 ವಾರ್ಡ್‌ಗಳಲ್ಲಿ ಬಿಜೆಪಿ 13, ಕಾಂಗ್ರೆಸ್‌ ಬೆಂಬಲಿತ ಶಹರ ವಿಕಾಸ ಪ್ಯಾನೆಲ್‌ನ 12 ಮತ್ತು 6 ಮಂದಿ ಪಕ್ಷೇತರರು ಚುನಾಯಿತರಾಗಿದ್ದಾರೆ.
Vijaya Karnataka Web nippani municipal council many plans to gain power
ನಿಪ್ಪಾಣಿ ನಗರಸಭೆ ಅತಂತ್ರ: ಅಧಿಕಾರಕ್ಕಾಗಿ ನಾನಾ ತಂತ್ರ


ಆಡಳಿತದ ಚುಕ್ಕಾಣಿ ಹಿಡಿಯಲು ಎರಡೂ ಪಕ್ಷ ಗಳು ಕಸರತ್ತು ನಡೆಸಲಿದ್ದು, ಪಕ್ಷೇತರರು ಕಿಂಗ್‌ಮೇಕರ್‌ ಆಗಿ ಹೊರಹೊಮ್ಮಿದ್ದಾರೆ.ಪ್ರಸ್ತುತ ಸನ್ನಿವೇಶದ ಪ್ರಕಾರ 6 ಜನ ಪಕ್ಷೇತರರಲ್ಲಿ ನಾಲ್ವರು ಕಾಂಗ್ರೆಸ್‌ನವರಾಗಿದ್ದು, ಇಬ್ಬರು ಬಿಜೆಪಿ ಪರ ಒಲವು ಹೊಂದಿದವರಾಗಿದ್ದಾರೆ. ಹೀಗಾದಲ್ಲಿ ಕಾಂಗ್ರೆಸ್‌ ಪಕ್ಷ ನಗರಸಭೆ ಅಧಿಕಾರಕ್ಕೇರಲಿದೆ.

ಪಕ್ಷೇತರರನ್ನು ಒಲಿಸಿಕೊಳ್ಳಲು ಎರಡೂ ಪಕ್ಷ ಗಳು ಪೈಪೋಟಿ ನಡೆಸಲಿವೆ. ಈ ಹಿಂದಿನಂತೆ ಈ ಬಾರಿಯೂ ಕೂಡ ರೆಸಾರ್ಟ್‌ ರಾಜಕೀಯಕ್ಕೆ ನಾಂದಿ ಹಾಡಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕೇವಲ 6 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 7 ಸ್ಥಾನಗಳನ್ನು ಹೆಚ್ಚಿಗೆ ಪಡೆದುಕೊಂಡು ಅಧಿಕಾರ ಸ್ಥಾಪನೆಗೆ 'ಕೈ' ಹಾಕಲಿದೆ. ಎರಡು ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ನಗರಸಭೆ ಅಧ್ಯಕ್ಷ ರಾಗಿದ್ದ ವಿಲಾಸ ಗಾಡಿವಡ್ಡರ ಎರಡರಲ್ಲೂ ಅತಿ ಹೆಚ್ಚಿನ ಮತಗಳ ಅಂತರದಿಂದ ಸತತ ನಾಲ್ಕನೇ ಬಾರಿ ಆಯ್ಕೆ ಆಗಿ ದಾಖಲೆ ನಿರ್ಮಿಸಿದ್ದಾರೆ.

ವಾರ್ಡ್‌ 24 ರಲ್ಲಿ 812 ಮತ್ತು ವಾರ್ಡ್‌ 31 ರಲ್ಲಿ 612 ಮತಗಳ ಲೀಡ್‌ನಿಂದ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಎರಡೂ ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳು ನಾಲ್ಕನೇ ಒಂದು ಭಾಗದಷ್ಟು ಮತ್ರ ಮತ ಪಡೆಯಲು ಸಾಧ್ಯವಾಗಿದೆ.ಅದೇ ರೀತಿ ಕಾಂಗ್ರೆಸ್‌ನ ಶಾಂತಿ ಸಾವಂತ 692 ಮತ್ತು ಗೀತಾ ಸುನೀಲ ಪಾಟೀಲ 418 ಮತಗಳ ಲೀಡ್‌ ಪಡೆದಿದ್ದಾರೆ. ಬಿಜೆಪಿ ಸುಜಾತಾ ರವಿ ಕದಂ 12 ಮತ್ತು ಕಾಂಗ್ರೆಸ್‌ ದತ್ತಾತ್ರೇಯ ನಾಯಿಕ 23 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಟ್ಟು 15 ಮಹಿಳಾ ಸ್ಥಾನಗಳಲ್ಲಿ 9 ಬಿಜೆಪಿ, 3 ಕಾಂಗ್ರೆಸ್‌ ಮತ್ತು 3 ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ನಿಪ್ಪಾಣಿ ನಗರಸಭೆ ಚುನಾವಣೆಯಲ್ಲಿ ವಾರ್ಡ್‌ವಾರು ಗೆದ್ದ ಅಭ್ಯರ್ಥಿಗಳು ಪಡೆದ ಮತ, ಪಕ್ಷ ಮತ್ತು ದ್ವಿತೀಯ ಸ್ಥಾನ ಪಡೆದ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.

ವಾರ್ಡ್‌ 1 : ಸುಜಾತಾ ರವಿ ಕದಂ-329 ಮತ(ಬಿಜೆಪಿ)

ವಾರ್ಡ್‌ 2 : ರಾಜೇಂದ್ರ ಶಹಾ- 578(ಪಕ್ಷೇತರ)

ವಾರ್ಡ್‌ 3 : ಸಂಜಯ ಸಾಂಗಾವಕರ- 536(ಕಾಂಗ್ರೆಸ್‌)

ವಾರ್ಡ್‌ 4 : ರವೀಂದ್ರ ಶಿಂಧೆ-596(ಕಾಂಗ್ರೆಸ್‌)

ವಾರ್ಡ್‌ 5 : ಸಂತೋಷ ಸಾಂಗಾವಕರ - 467(ಬಿಜೆಪಿ)

ವಾರ್ಡ್‌ 6: ಪ್ರಭಾವತಿ ಸೂರ್ಯವಂಶಿ- 431(ಬಿಜೆಪಿ)

ವಾರ್ಡ್‌ 7 : ಗೀತಾ ಸುನೀಲ ಪಾಟೀಲ- 873(ಪಕ್ಷೇತರ)

ವಾರ್ಡ್‌ 8 : ಸೋನಲ್‌ ಕೊಠಾಡಿಯಾ-765(ಬಿಜೆಪಿ)

ವಾರ್ಡ್‌ 9 : ರಾಣಿ ಶೇಲಾರ- 411(ಬಿಜೆಪಿ)

ವಾರ್ಡ್‌ 10 : ಜಯವಂತ ಭಾಟ್ಲೆ- 579(ಬಿಜೆಪಿ)

ವಾರ್ಡ್‌ 11 : ದೀಪಾಲಿ ಗಿರಿ- 548(ಪಕ್ಷೇತರ)

ವಾರ್ಡ್‌ 12 : ರಂಜನಾ ಇಂಗವಲೆ- 519(ಬಿಜೆಪಿ)

ವಾರ್ಡ್‌ 13 : ಅನಿತಾ ಪಠಾಡೆ- 920(ಕಾಂಗ್ರೆಸ್‌)

ವಾರ್ಡ್‌ 14 : ದತ್ತಾತ್ರೇಯ ನಾಯಿಕ- 658 (ಕಾಂಗ್ರೆಸ್‌)

ವಾರ್ಡ್‌ 15 : ನಗೀನಾ ಮುಲ್ಲಾ-(ಪಕ್ಷೇತರ) 573

ವಾರ್ಡ್‌ 16 : ಗಿರಿ ಜಸರಾಜ ಕಮಲಾಕರ-(ಪಕ್ಷೇತರ) 582

ವಾರ್ಡ್‌ 17 : ಸಂಜಯ ಪಾವಲೆ- 449 (ಕಾಂಗ್ರೆಸ್‌)

ವಾರ್ಡ್‌ 18 : ವಿನಾಯಕ ವಡೆ-541(ಬಿಜೆಪಿ)

ವಾರ್ಡ್‌ 19 : ಶೌಕತ್‌ ಮಣೇರ-565(ಕಾಂಗ್ರೆಸ್‌)

ವಾರ್ಡ್‌ 20: ಸಂತೋಷ ಮಾನೆ-308(ಕಾಂಗ್ರೆಸ್‌)

ವಾರ್ಡ್‌ 21 : ಅರುಣಾ ಮುದಕುಡೆ- 713(ಬಿಜೆಪಿ)

ವಾರ್ಡ್‌ 22 : ಸದ್ದಾಂ ನಗಾರಜಿ- 614(ಬಿಜೆಪಿ)

ವಾರ್ಡ್‌ 23 : ಸರ್ಫರಾಜ್‌ ಬಡೇಘರ-544(ಕಾಂಗ್ರೆಸ್‌)

ವಾರ್ಡ್‌ 24 : ವಿಲಾಸ ಗಾಡಿವಡ್ಡರ- 1063(ಕಾಂಗ್ರೆಸ್‌)

ವಾರ್ಡ್‌: 25 : ನೀತಾ ಬಾಗಡೆ- 456(ಬಿಜೆಪಿ)

ವಾರ್ಡ್‌ 26 : ಆಶಾ ವಿಜಯ ಟವಳೆ-502(ಬಿಜೆಪಿ)

ವಾರ್ಡ್‌ 27 : ಬಾಳಾಸಾಹೇಬ ದೇಸಾಯಿ- 720(ಕಾಂಗ್ರೆಸ್‌)

ವಾರ್ಡ್‌ 28 : ಶಾಂತಿ ದೀಪಕ ಸಾವಂತ- 930(ಕಾಂಗ್ರೆಸ್‌)

ವಾರ್ಡ್‌ 29 : ಕಾವೇರಿ ಸಾಗರ ಮಿರ್ಜೆ- 564(ಬಿಜೆಪಿ)

ವಾರ್ಡ್‌ 30 : ಉಪಾಸನಾ ಸಚಿನ್‌ ಗಾರವೆ- 212(ಪಕ್ಷೇತರ)

ವಾರ್ಡ್‌ 31 : ವಿಲಾಸ ಗಾಡಿವಡ್ಡರ- 867(ಕಾಂಗ್ರೆಸ್‌)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ