ಆ್ಯಪ್ನಗರ

ಕೊಟ್ಟಲಗಿ ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ

ತೆಲಸಂಗ: ಸಮೀಪದ ಕೊಟ್ಟಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮದೀನಾ ಮುಲ್ಲಾ ವಿರುದ್ಧ ಗ್ರಾಪಂ ಸದಸ್ಯರು ಅವಿಶ್ವಾಸ ಮಂಡಿಸಿದರು...

Vijaya Karnataka 13 Mar 2019, 5:00 am
ತೆಲಸಂಗ : ಸಮೀಪದ ಕೊಟ್ಟಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮದೀನಾ ಮುಲ್ಲಾ ವಿರುದ್ಧ ಗ್ರಾಪಂ ಸದಸ್ಯರು ಅವಿಶ್ವಾಸ ಮಂಡಿಸಿದರು.
Vijaya Karnataka Web BEL-12TELSANG2


ಮಂಗಳವಾರ ಚಿಕ್ಕೋಡಿ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಉಪಸ್ಥಿತಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ 15ರ ಪೈಕಿ 12 ಸದಸ್ಯರು ಹಾಜರಿದ್ದು ಕೈ ಎತ್ತುವ ಮೂಲಕ ಅವಿಶ್ವಾಸ ಮಂಡಿಸಿದರು. ಅಧ್ಯಕ್ಷೆ ಸೇರಿ 3 ಸದಸ್ಯರು ಸಭೆಗೆ ಗೈರು ಉಳಿದಿದ್ದು, ಕೋರಂ ಇದ್ದ ಕಾರಣ ಉಪವಿಭಾಗಾಧಿಕಾರಿಗಳು ಸಭೆ ನಡೆಸಿದರು.

12 ಅವಿಶ್ವಾಸ ವ್ಯಕ್ತಪಡಿಸಿದ ಸದಸ್ಯರಿಂದ ಸಹಿ ಪಡೆದ ಉಪವಿಭಾಗಾಧಿಕಾರಿ, ಮದೀನಾ ಮುಲ್ಲಾ ವಿರುದ್ಧದ ಅವಿಶ್ವಾಸವನ್ನು ಘೋಷಿಸಿದರು. ತಿಂಗಳಿಂದ ಅಧ್ಯಕ್ಷೆಯನ್ನು ಕೆಳಗಿಳಿಸಬೇಕೆಂಬ ಬಿಜೆಪಿ ಮುಖಂಡರ ಪ್ರಯತ್ನ ಕೈಗೂಡಿದ್ದು, ಅಧ್ಯಕ್ಷ ಸ್ಥಾನ ತೆರವುಗೊಂಡಿದ್ದರಿಂದ ಸ್ಥಳೀಯ ರಾಜಕಿಯ ಗುದ್ದಾಟಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಂತಾಗಿದೆ.

ಜಿಪಂ ಮಾಜಿ ಸದಸ್ಯ ಸಿದರಾಯ ಯಲಡಗಿ, ತಾಪಂ ಮಾಜಿ ಸದಸ್ಯ ಗುರುಬಸು ಬಂಡರಗೋಟಿ, ಬಿಜೆಪಿ ಮುಖಂಡ ಗುರು ಮುಗ್ಗನವರ್‌, ಅಪ್ಪಾಸಾಬ ಪಾಟೀಲ, ಸಿದ್ದಣ್ಣ ತೇಲಿ, ಸಣ್ಣಪ್ಪ ದಾನಪ್ಪಗೋಳ, ಬಸು ಕಲಾಟೆ, ಸಿದ್ದು ದೊಡ್ಡನಿಂಗಪ್ಪಗೋಳ, ಗುರು ಈಶ್ವರಪ್ಪಗೋಳ, ರಘು ದೊಡ್ಡನಿಂಗಪ್ಪಗೋಳ ಸೇರಿದಂತೆ ಅನೇಕ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ