ಆ್ಯಪ್ನಗರ

ಪಾಲನೆಯಾಗದ ಆದೇಶ: ಬಸ್‌ ಜಪ್ತಿ

ಬೈಲಹೊಂಗಲ: ನ್ಯಾಯಾಲಯದ ಆದೇಶ ಪಾಲನೆ ಮಾಡದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ವಕೀಲರು, ಬಸ್‌ ಜಪ್ತಿ ಮಾಡಿಸಿ ...

Vijaya Karnataka 28 Jun 2019, 5:00 am
ಬೈಲಹೊಂಗಲ: ನ್ಯಾಯಾಲಯದ ಆದೇಶ ಪಾಲನೆ ಮಾಡದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ವಕೀಲರು, ಬಸ್‌ ಜಪ್ತಿ ಮಾಡಿಸಿ ಬಿಸಿ ಮುಟ್ಟಿಸಿದರು.
Vijaya Karnataka Web non implemented order bus seized
ಪಾಲನೆಯಾಗದ ಆದೇಶ: ಬಸ್‌ ಜಪ್ತಿ


2012ರಲ್ಲಿ ಪಟ್ಟಿಹಾಳ ಕ್ರಾಸ್‌ನಲ್ಲಿ ಬಸ್‌ಗೆ ಮತ್ತೊಂದು ಬಸ್‌ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಆ ಸಂದರ್ಭದಲ್ಲಿ 9 ಜನರು ಗಾಯಗೊಂಡಿದ್ದರು. ಬಸ್‌ ಡಿಪೋದವರು ಸಂಧಾನದ ವೇಳೆ ಪರಿಹಾರ ಒದಗಿಸಲು ಒಪ್ಪಿಗೆ ನೀಡಿದ್ದರು. ಆದರೆ ಎಷ್ಟೇ ಬಾರಿ ತಿಳಿಸಿದ್ದರೂ ಹಣ ಪಾವತಿಸಿರಲಿಲ್ಲ.

ಆದ್ದರಿಂದ ವಾಯವ್ಯ ಕರ್ನಾಟಕ ಸಾರಿಗೆಯ ಬಸ್‌ಗಳನ್ನು ಜಪ್ತಿ ಮಾಡಲು ದಿವಾಣಿ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಕಾವೇರಿ ಕಲ್ಮಠ ಆದೇಶ ನೀಡಿದ್ದರು. ಅದರಂತೆ ಎರಡು ಬಸ್‌ಗಳನ್ನು ಜಪ್ತಿ ಮಾಡಲಾಗಿತ್ತು. 5 ಲಕ್ಷ ರೂ. ಹಣ ತುಂಬಿ ಸಾರಿಗೆ ಘಟಕ ಬಸ್‌ಗಳನ್ನು ವಾಪಸ್‌ ಪಡೆದಿರುವುದಾಗಿ ತಿಳಿದು ಬಂದಿದೆ.

ಕಂಪ್ಯೂಟರ್‌, ನಗದು ಕಳವು:
ಪಟ್ಟಣದ ಬಸ್‌ ನಿಲ್ದಾಣ ಪಕ್ಕದ ತಟವಾಟಿ ಹೀರೊ ಹೊಂಡಾ ಶೋ ರೂಂ ಮತ್ತು ಎಚ್‌ಪಿ ಗ್ಯಾಸ್‌ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದಾರೆ.

14 ಸಾವಿರ ರೂ. ನಗದು, 10 ಸಾವಿರ ರೂ. ಮೌಲ್ಯದ ಕಂಪ್ಯೂಟರ್‌ ಕಳ್ಳತನ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ತಟವಾಟಿ ತಿಳಿಸಿದರು. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ