ಆ್ಯಪ್ನಗರ

ದೇಶಾದ್ಯಂತ ಎನ್‌ಆರ್‌ಸಿ ಜಾರಿಗೆ ಒತ್ತಾಯ

ಬೆಳಗಾವಿ: ಕೇಂದ್ರ ಸರಕಾರ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ...

Vijaya Karnataka 25 Nov 2019, 5:00 am
ಬೆಳಗಾವಿ: ಕೇಂದ್ರ ಸರಕಾರ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಭಾನುವಾರ ನಗರದ ಸಂಭಾಜಿ ವೃತ್ತದಲ್ಲಿಪ್ರತಿಭಟನೆ ನಡೆಸಿದರು.
Vijaya Karnataka Web 24 LBS 1_53
ದೇಶಾದ್ಯಂತ ಎನ್‌ಆರ್‌ಸಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.


ಕೇಂದ್ರ ಸರಕಾರ ಅಸ್ಸಾಂ ರಾಜ್ಯದಲ್ಲಿರಾಷ್ಟ್ರೀಯ ಪೌರತ್ವ ನೋಂದಣಿ ಪೂರ್ಣಗೊಳಿಸಿ ವರದಿ ಪ್ರಕಟಿಸಿದೆ. ಅಲ್ಲದೆ, ಅಸ್ಸಾಂದಲ್ಲಿ 11 ಲಕ್ಷಕ್ಕೂ ಹೆಚ್ಚು ಜನರನ್ನು ಎನ್‌ಆರ್‌ಸಿಯಿಂದ ಕೈಬಿಡಲಾಗಿದೆ. ಇದರರ್ಥ ಅಸ್ಸಾಂ ರಾಜ್ಯ ಒಂದರದಲ್ಲೇ ಇಷ್ಟೊಂದು ಜನರು ನುಸುಳುಕೋರರು ಇದ್ದಾರೆ. ಬಾಂಗ್ಲಾದೇಶದ, ಮ್ಯಾನ್ಮಾರ್‌ ಹಾಗೂ ಪಾಕಿಸ್ತಾನ ದೇಶಗಳಿಂದ ಕಾನೂನು ಬಾಹಿರವಾಗಿ ನುಸುಳುಕೋರರು ಭಾರತದಲ್ಲಿವಾಸಿಸುತ್ತಿದ್ದಾರೆ. ಹೀಗಾಗಿ ದೇಶದಲ್ಲಿಅಕ್ರಮ ನುಸುಳುಕೋರರ ನಿರ್ದಿಷ್ಟ ಸಂಖ್ಯೆ ತಿಳಿದುಕೊಳ್ಳಲು ದೇಶಾದ್ಯಂತ ಎನ್‌ಆರ್‌ಸಿ ನೋಂದಣಿ ಕಾರ್ಯ ನಡೆಯಬೇಕು. ದೇಶದ ಭದ್ರತೆ ದೃಷ್ಟಿಯಿಂದ ಕೇಂದ್ರ ಸರಕಾರ ಕೂಡಲೇ ನೋಂದಣಿ ನಡೆಸಬೇಕು ಎಂದು ಒತ್ತಾಯಿಸಿದರು.

ಉತ್ತರ ಪ್ರದೇಶದಲ್ಲಿಹಿಂದೂ ಮಹಾಸಭಾ, ಹಿಂದೂ ಸಮಾಜ ಪಕ್ಷದ ಅಧ್ಯಕ್ಷ ಕಮಲೇಶ ತಿವಾರಿ ಅವರನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಸಂಚು ದುಬೈನಿಂದ ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೆ, ಐವರು ಹಿಂದೂ ಸಂಘಟನೆ ಕಾರ್ಯಕರ್ತರನ್ನೂ ಕೂಡ ಹತ್ಯೆ ಮಾಡಲಾಗಿದೆ. ಆದ್ದರಿಂದ ಕೇಂದ್ರ ಸರಕಾರ ಹತ್ಯೆ ಮಾಡುವವರ ಜಾಲವನ್ನು ಭೇದಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ