ಆ್ಯಪ್ನಗರ

ಖೊಟ್ಟಿ ಮರಣ ಪ್ರಮಾಣಪತ್ರ ಸಲ್ಲಿಸಿ ಆಸ್ತಿ ಕಬಳಿಕೆ ಯತ್ನ: ಓರ್ವನ ಬಂಧನ

ರಾಯಬಾಗ: ಖೊಟ್ಟಿ ಮರಣ ಪ್ರಮಾಣಪತ್ರ ಪಡೆದು ಆಸ್ತಿ ಹೊಡೆಯಲು ಯತ್ನಿಸಿದ ಐವರ ಮೇಲೆ ...

Vijaya Karnataka 18 Feb 2019, 5:00 am
ರಾಯಬಾಗ : ಖೊಟ್ಟಿ ಮರಣ ಪ್ರಮಾಣಪತ್ರ ಪಡೆದು ಆಸ್ತಿ ಹೊಡೆಯಲು ಯತ್ನಿಸಿದ ಐವರ ಮೇಲೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಓರ್ವನನ್ನು ಬಂಧಿಸಲಾಗಿದೆ. ನ್ಯಾಯವಾದಿ ಆರ್‌.ಎಚ್‌. ಗೊಂಡೆ ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
Vijaya Karnataka Web obtaining mortgage certificates and obtaining property liability ones detention
ಖೊಟ್ಟಿ ಮರಣ ಪ್ರಮಾಣಪತ್ರ ಸಲ್ಲಿಸಿ ಆಸ್ತಿ ಕಬಳಿಕೆ ಯತ್ನ: ಓರ್ವನ ಬಂಧನ


''ಖೈರವಾಡಿಯ ರಾಯಪ್ಪ ಗೊಂಡೆ ಅವರ ಒಡೆತನಕ್ಕೆ ಸೇರಿದ ಜಮೀನಿನಲ್ಲಿ 12 ಎಕರೆ 11 ಗುಂಟೆ ಜಮೀನನ್ನು 1947ರಲ್ಲಿ ಅವರ ಪೂರ್ವಜರಾದ ಶಿದ್ಲಿಂಗವ್ವಾ ರಾಯಪ್ಪ ಗೊಂಡೆ ಹಾಗೂ ಕಲ್ಲವ್ವ ಶಿವಪ್ಪ ಕಗ್ಗೂಡಿ ಇವರು ಬಾಳಪ್ಪ ಕೆಂಚಪ್ಪ ಪೂಜಾರಿಯವರಿಂದ ಖರೀದಿ ಪಡೆದಿದ್ದರು. ಆದರೆ, 'ಈ ಜಮೀನಿನ ಖರೀದಿಯ ಸಮಯದಲ್ಲಿ ಬಾಳಪ್ಪ ಕೆಂಚಪ್ಪ ಪೂಜಾರಿ ಇರಲಿಲ್ಲ, ಅವರು 1946ರಲ್ಲಿಯೇ ಮೃತಪಟ್ಟಿದ್ದಾರೆಂದು ಅವರ ಸಂಬಂಧಿಧಿಕರಾದ ಬಾಳಪ್ಪ ಪೂಜಾರಿ, ಸಿದ್ರಾಮ ಪೂಜಾರಿ, ರಾಯಪ್ಪ ಪೂಜಾರಿ, ಅಡಿವೆಪ್ಪ ಪೂಜಾರಿ, ತಮ್ಮಣ್ಣ ಪೂಜಾರಿ ಮೊದಲಾದವರು ರಾಯಬಾಗ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಬಾಳಪ್ಪ ಕೆಂಚಪ್ಪ ಪೂಜಾರಿ ಅವರ ಮರಣದ ಆದೇಶ ಪಡೆದುಕೊಂಡಿದ್ದರು. ಈ ಆದೇಶದ ಪತ್ರವನ್ನು ತಹಸೀಲ್ದಾರ ಕಾರ್ಯಾಲಯಕ್ಕೆ ಸಲ್ಲಿಸಿ, ಖೊಟ್ಟಿ ಮರಣ ಪ್ರಮಾಣ ಪತ್ರ ಪಡೆದು 12 ಎಕರೆ ಜಮೀನನ್ನು ಕಬಳಿಸಲು ಯತ್ನಿಸಿದ್ದಾರೆ'', ಎಂದು ಅವರು ಮಾಹಿತಿ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸಲ್ಲಿಸಿದ ದೂರಿನನ್ವಯ ಪೊಲೀಸರು ರಾಯಪ್ಪ ಸಿದ್ಧಪ್ಪ ಪೂಜಾರಿ ಅವರನ್ನು ಬಂಧಿಧಿಸಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ ಎಂದು ಅವರು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ