ಆ್ಯಪ್ನಗರ

ಅಧಿಕಾರಿಗಳ ಭರವಸೆ: ಧರಣಿ ಸತ್ಯಾಗ್ರಹ ಅಂತ್ಯ

ಬೋರಗಾಂವ: ಸಮೀಪದ ಭೋಜ ಗ್ರಾಪಂನ 13ನೇ ಹಣಕಾಸು ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ...

Vijaya Karnataka 31 Jan 2019, 5:00 am
ಬೋರಗಾಂವ : ಸಮೀಪದ ಭೋಜ ಗ್ರಾಪಂನ 13ನೇ ಹಣಕಾಸು ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ವಿರುದ್ಧ ಕೈಗೊಂಡಿದ್ದ ಧರಣಿ ಸತ್ಯಾಗ್ರಹ ಬುಧವಾರ ಅಂತ್ಯಗೊಂಡಿದೆ.
Vijaya Karnataka Web BEL-30ICH4


ಭೋಜ ಗ್ರಾಮಕ್ಕೆ ಇಂದು ಚಿಕ್ಕೋಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಪಾಟೀಲ ಹಾಗೂ ವ್ಯವಸ್ಥಾಪಕ ಜಿ.ಎಂ.ಸ್ವಾಮಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಕುರಿತು ಕ್ರಮ ಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಮನ ಸೆಳೆದಿರುವ ಬಗ್ಗೆ ಧರಣಿ ನಿರತರಿಗೆ ಲಿಖಿತ ಪತ್ರ ನೀಡಿದ್ದರಿಂದ ಧರಣಿ ಹಿಂಪಡೆಯಲಾಗಿದೆ ಎಂದು ಧರಣಿ ನೇತೃತ್ವ ವಹಿಸಿದ್ದ ಭರತೇಶ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕುಪಾನಟ್ಟಿ ತಿಳಿಸಿದರು.

ಭೋಜ ಗ್ರಾಪಂ ಅಧ್ಯಕ್ಷೆ ಸುಪ್ರಿಯಾ ಕಡೋಲೆಯವರು 2017-18ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ ನೀರು ಪೂರೈಕೆಯ ಯೋಜನೆಗೆ ಪಂಪ್‌ ಖರೀದಿಯಲ್ಲಿ, ಸಿ.ಸಿ.ಕ್ಯಾಮರಾ ಅಳವಡಿಸುವ ಕ್ರಿಯಾ ಯೋಜನೆ ಕಾಮಗಾರಿ ಸೇರದಂತೆ ಹಲವು ಯೋಜನೆಗಳ ಪರಿಕರ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾಗಿ ಆರೋಪಿಸಿ ಭರತೇಶ ಕುಪಾನಟ್ಟಿ, ಅಜಿತ ಮಾಳಿ, ತಾಪಂ ಸದಸ್ಯ ಪ್ರಕಾಶ ವಡ್ಡರ, ವಿನೋದ ಸಂಕಪಾಳ ಮುಂತಾದವರು ಮಂಗಳವಾರದಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ