ಆ್ಯಪ್ನಗರ

ಬೈಲಹೊಂಗಲ ಪುರಸಭೆ ಮತ್ತೆ ಕಾಂಗ್ರೆಸ್‌ ವಶ

ಬೈಲಹೊಂಗಲ: ಸ್ಥಳೀಯ ಪುರಸಭೆಯಲ್ಲಿ ಈ ಬಾರಿ ಸಹ ಕಾಂಗ್ರೆಸ್‌ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ...

Vijaya Karnataka 4 Sep 2018, 5:00 am
ಬೈಲಹೊಂಗಲ: ಸ್ಥಳೀಯ ಪುರಸಭೆಯಲ್ಲಿ ಈ ಬಾರಿ ಸಹ ಕಾಂಗ್ರೆಸ್‌ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. 18 ಕಾಂಗ್ರೆಸ್‌, 6 ಬಿಜೆಪಿ ಹಾಗೂ 3 ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿ ಗೆಲುವಿನ ನಗೆ ಬೀರಿದ್ದಾರೆ.
Vijaya Karnataka Web once again congress gained the bailhongal town municipality
ಬೈಲಹೊಂಗಲ ಪುರಸಭೆ ಮತ್ತೆ ಕಾಂಗ್ರೆಸ್‌ ವಶ


ಆರು ವಾರ್ಡ್‌ಗಳನ್ನು ಹೊರತುಪಡಿಸಿ ಬಹುತೇಕ ಕಡೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಹಣಾಹಣಿ ಕಂಡು ಬಂದಿದೆ. ಐದು ವಾರ್ಡ್‌ಗಳಲ್ಲಿ ಬಿಜೆಪಿ ಅತಿ ಕಡಿಮೆ ಅಂತರದಲ್ಲಿ ಸೋಲು ಕಂಡಿದೆ. ವಾರ್ಡ್‌ ನಂ.12ರಲ್ಲಿ ಅಶೋಕ ಭಂಡಾರಿ 11 ಮತ, ವಾರ್ಡ್‌ ನಂ.22ರಲ್ಲಿ ಸುವರ್ಣಾ ಯಡಳ್ಳಿ 11 ಮತ, ವಾರ್ಡ್‌ ನಂ.24ರಲ್ಲಿ ಕಿರಣ ಹಂಚಿನಮನಿ 18 ಮತ, ವಾರ್ಡ್‌ ನಂ. 6ರಲ್ಲಿ ಲಕ್ಷ್ಮೀ ಗುಂಡ್ಲೂರ 56 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.

7ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಮೂಗಿ ಸತತವಾಗಿ 5 ಬಾರಿ ಗೆಲುವು ಸಾಧಿಸಿದ್ದು, ಪ್ರಸ್ತುತ ಪುರಸಭೆ ಹಿರಿಯ ಸದಸ್ಯರಾಗಿದ್ದಾರೆ. 13ನೇ ವಾರ್ಡ್‌ನ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಬೆಟಗೇರಿ ಕೇವಲ 5 ಮತಗಳ ಅಂತರದಿಂದ ಸೋತಿದ್ದಾರೆ. 3ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಶೋಭಾ ತುರಮರಿ ಕೇವಲ 35 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಸಂಭ್ರಮಾಚರಣೆ: ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಸೋಮವಾರ ಬೆಳಗ್ಗೆ 8ಕ್ಕೆ ಆರಂಭವಾದ ಮತ ಎಣಿಕೆ 11ಕ್ಕೆ ಮುಕ್ತಾಯಗೊಂಡಿತು. ಎಣಿಕೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳು, ಬೆಂಬಲಿಗರು ಮತ ಎಣಿಕೆ ಕೇಂದ್ರದ ಸುತ್ತ ಜಮಾಯಿಸಿದರು. ವಿಜೇತರ ಹೆಸರು ಘೋಷಿಸುತ್ತಿದ್ದಂತೆ ಬೆಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೊದಲ ಬಾರಿಗೆ ಗೆದ್ದವರು: ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅತಿ ಕಿರಿಯ ವಯಸ್ಸಿನ ವಾರ್ಡ್‌ ನಂ.23ರ ಕಾಂಗ್ರೆಸ್‌ ಅಭ್ಯರ್ಥಿ ವಿಜಯ ಬೋಳನ್ನವರ, ವಾರ್ಡ್‌ ನಂ.15ರ ಪಕ್ಷೇತರ ಅಭ್ಯರ್ಥಿ ಸಾಗರ ಭಾವಿಮನಿ, ವಾರ್ಡ್‌ ನಂ.11ರ ಕಾಂಗ್ರೆಸ್‌ ಅಭ್ಯರ್ಥಿ ಅರ್ಜುನ ಕಲಕುಟಕರ ಚುನಾಯಿತರಾದರು. ಕಾಂಗ್ರೆಸ್‌ನ ಶಿವಬಸಪ್ಪ ಕುಡಸೋಮಣ್ಣವರ, ಅಮೀರಬಿ ಬಾಗವಾನ, ಹೇಮಲತಾ ಹಿರೇಮಠ, ದಿಲ್ಲಶಾದ ನದಾಫ್‌, ಶಶಿಕಲಾ ಹೊಸಮನಿ, ಶಶಿಕಲಾ ಕಲ್ಲೊಳ್ಳಿ, ಅಂಜನಾ ಬೊಂಗಾಳೆ, ಲಕ್ಷ್ಮೀ ಬಡ್ಲಿ, ಬಿಜೆಪಿಯ ಜಗದೀಶ ಜಂಬಗಿ, ಶಿವಾನಂದ ಕೋಲಕಾರ, ವಾಣಿ ಪತ್ತಾರ, ಸುಧೀರ ವಾಲಿ ಹಾಗೂ ಪಕ್ಷೇತರ ಅಭ್ಯರ್ಥಿ ಫಕೀರಪ್ಪ ದೇವಲಾಪುರ ಮೊದಲ ಬಾರಿಗೆ ಗೆಲುವು ಸಾಧಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ