ಆ್ಯಪ್ನಗರ

ಆಪರೇಷನ್‌ ಮುಸ್ಕಾನ್‌; 8 ಮಕ್ಕಳ ರಕ್ಷಣೆ

ಬೆಳಗಾವಿ: ನಾನಾ ಕಾರಣಗಳಿಗೆ ತುತ್ತಾಗಿ ಶಿಕ್ಷಣದಿಂದ ವಂಚಿತಗೊಂಡಿದ್ದ ಎಂಟು ಮಕ್ಕಳನ್ನು ಶನಿವಾರ ನಗರದಲ್ಲಿ ನಡೆಸಿದ 'ಆಪರೇಷನ್‌ ಮುಸ್ಕಾನ್‌'ನಿಂದ ರಕ್ಷಣೆ ...

Vijaya Karnataka 21 Jul 2019, 9:34 pm
ಬೆಳಗಾವಿ : ನಾನಾ ಕಾರಣಗಳಿಗೆ ತುತ್ತಾಗಿ ಶಿಕ್ಷಣದಿಂದ ವಂಚಿತಗೊಂಡಿದ್ದ ಎಂಟು ಮಕ್ಕಳನ್ನು ಶನಿವಾರ ನಗರದಲ್ಲಿ ನಡೆಸಿದ 'ಆಪರೇಷನ್‌ ಮುಸ್ಕಾನ್‌'ನಿಂದ ರಕ್ಷಣೆ ಮಾಡಲಾಗಿದೆ. ಪೊಲೀಸ್‌, ಬಾಲಕಾರ್ಮಿಕ ಶಾಖೆ, ಮಕ್ಕಳ ಸಹಾಯವಾಣಿ ಮತ್ತು ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
Vijaya Karnataka Web operation muskan eight children rescued
ಆಪರೇಷನ್‌ ಮುಸ್ಕಾನ್‌; 8 ಮಕ್ಕಳ ರಕ್ಷಣೆ


ನಗರದ ಖಡೇ ಬಜಾರ್‌, ಗಣಪತಿ ಗಲ್ಲಿ, ಸಿಟಿ ಬಸ್‌ ನಿಲ್ದಾಣ, ಪೋರ್ಟ್‌ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ದಾಳಿ ನಡೆಸಿದ ಕಾರ್ಯಾಚರಣೆ ತಂಡ ಒಟ್ಟು 8 ಮಕ್ಕಳನ್ನು ರಕ್ಷಣೆ ಮಾಡಿದ್ದರು. ರಕ್ಷಣೆ ಮಾಡಿದ ಮಕ್ಕಳು ಗ್ಯಾರೇಜ್‌, ಇಲೆಕ್ಟ್ರಿಕಲ್‌ ಮತ್ತು ಫುಟ್‌ವೇರ್‌ ಶಾಪ್‌ಗಳಲ್ಲಿ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಎಂಟು ಮಕ್ಕಳ ಪೈಕಿ 14 ವರ್ಷದೊಳಿನ 7 ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಅಪ್ತಾಪ್ತ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿರುವ ಕುರಿತು ಜು.23 ರಂದು ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ನಡೆಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ