ಆ್ಯಪ್ನಗರ

ಆಟೋ ನಿಲ್ದಾಣ ತೆರವಿಗೆ ವಿರೋಧ

ಬೆಳಗಾವಿ: ಸಂಚಾರಕ್ಕೆ ಸಮಸ್ಯೆ ಒಡ್ಡುತ್ತಿದ್ದ ಆಟೋ ನಿಲ್ದಾಣ ತೆರವುಗೊಳಿಸಲು ಮುಂದಾದ ಪೊಲೀಸರ ಕ್ರಮ ಖಂಡಿಸಿ ಮಂಗಳವಾರ ಚನ್ನಮ್ಮ ...

Vijaya Karnataka 15 Aug 2018, 5:00 am
ಬೆಳಗಾವಿ: ಸಂಚಾರಕ್ಕೆ ಸಮಸ್ಯೆ ಒಡ್ಡುತ್ತಿದ್ದ ಆಟೋ ನಿಲ್ದಾಣ ತೆರವುಗೊಳಿಸಲು ಮುಂದಾದ ಪೊಲೀಸರ ಕ್ರಮ ಖಂಡಿಸಿ ಮಂಗಳವಾರ ಚನ್ನಮ್ಮ ವೃತ್ತ ಬಳಿ ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಿರುವ ಆಟೋ ನಿಲ್ದಾಣ ಚಾಲಕರು ಪ್ರತಿಭಟನೆ ನಡೆಸಿದರು.
Vijaya Karnataka Web BLG-1408-2-52-14MAHESH8


ಮಧ್ಯ ಪ್ರವೇಶಿಸಿದ ಶಾಸಕ ಅನಿಲ ಬೆನಕೆ, 20ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಟೋ ನಿಲ್ದಾಣವನ್ನು ಏಕಾಏಕಿ ಬಂದ್‌ ಮಾಡಲು ಮುಂದಾಗಿರುವುದು ತಪ್ಪು. ಚನ್ನಮ್ಮ ವೃತ್ತ ಬಳಿ ಗಣೇಶ ದೇವಸ್ಥಾನಕ್ಕೆ ಬರುವ ಭಕ್ತರು ದೇವಸ್ಥಾನ ಅಕ್ಕ ಪಕ್ಕ ಮತ್ತು ಆಟೋ ನಿಲ್ದಾಣ ಬಳಿ ಕಾರು ಪಾರ್ಕ್‌ ಮಾಡುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ, ಆಟೋ ನಿಲ್ದಾಣ ತೆರವುಗೊಳಿಸುವ ಬದಲು ಅನಧಿಕೃತ ಪಾರ್ಕಿಂಗ್‌ ವ್ಯವಸ್ಥೆಗೆ ನಿರ್ಬಂಧ ಹೇರಬೇಕು ಎಂದು ಪೊಲೀಸರಿಗೆ ಸಲಹೆ ನೀಡಿದರು. ಆಟೋ ಚಾಲಕರೂ ಕೂಡ ಬೇಕಾಬಿಟ್ಟಿ ವಾಹನ ನಿಲಗಡೆ ಮಾಡದೆ, ಸರತಿ ಸಾಲಿಯಲ್ಲಿ ನಿಂತು ಸುವ್ಯವಸ್ಥೆ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ