ಆ್ಯಪ್ನಗರ

ನಮ್ಮ ಅಭ್ಯರ್ಥಿ ಇನ್ನೊಬ್ಬರ ದುಡ್ಡು ಹೊಡೆದು ಸಾವಕಾರ್‌ ಆಗಿಲ್ಲ

ಗೋಕಾಕ: ''ನಮ್ಮ ಅಭ್ಯರ್ಥಿ ಸಕ್ರಿ ...

Vijaya Karnataka 2 Dec 2019, 5:00 am
ಗೋಕಾಕ: ''ನಮ್ಮ ಅಭ್ಯರ್ಥಿ ಸಕ್ರಿ ಫ್ಯಾಕ್ಟರಿ ಓನರಲ್ಲಾ. ಯಾರದೂ ಬಾಕಿ ಇಟ್ಟುಕೊಂಡಿಲ್ಲ. ಯಾರದೋ ದುಡ್ಡು ಹೊಡೆದು ಸಾವಕಾರ್‌ ಆಗಿಲ್ಲಾ್ಲ'' ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರಿಗೆ ಟಾಂಗ್‌ ನೀಡಿದರು.
Vijaya Karnataka Web our candidate is not become savakar by garbing others money
ನಮ್ಮ ಅಭ್ಯರ್ಥಿ ಇನ್ನೊಬ್ಬರ ದುಡ್ಡು ಹೊಡೆದು ಸಾವಕಾರ್‌ ಆಗಿಲ್ಲ


ಭಾನುವಾರ ರಾತ್ರಿ ಪಟ್ಟಣದಲ್ಲಿಚುನಾವಣೆ ಪ್ರಚಾರ ಮಾಡಿದ ಅವರು,''ಯಡಿಯೂರಪ್ಪ ಅವರು ಅಭಿವೃದ್ಧಿ ಹೆಸರಲ್ಲಿಮತ ಕೇಳೋದಿಲ್ಲ. ಲಿಂಗಾಯತ ಸಮುದಾಯದ ಎಷ್ಟು ಕುಟುಂಬಗಳನ್ನು ಅವರು ಮೇಲೆತ್ತಿದ್ದಾರೆ? ಯಡಿಯೂರಪ್ಪ ತಾವು ಬೆಳೆಯಲು ಲಿಂಗಾಯತ ಸಮಾಜವನ್ನು ನಾಶ ಮಾಡಲು ಹೊರಟಿದ್ದಾರೆ. ಅನರ್ಹ ಶಾಸಕರ ಪರವಾಗಿ ಅವರು ಮತ ಕೇಳುತ್ತಾರೆ'' ಎಂದು ಹರಿಹಾಯ್ದರು.

ಕೆಲವು ಅನರ್ಹ ಶಾಸಕರು ಹನಿ ಟ್ರ್ಯಾಪ್‌ ಆಗಿರುವ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಗೃಹ ಸಚಿವರು ಯಾರ ಹೆಸರೂ ಹೊರ ಬೀಳದ ಹಾಗೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಒಂದು ದಿನ ಸತ್ಯ ಹೊರಬರುತ್ತದೆ.
- ಎಚ್‌.ಡಿ.ಕುಮಾರಸ್ವಾಮಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ