ಆ್ಯಪ್ನಗರ

ಬಿಮ್ಸ್ ಆಸ್ಪತ್ರೆಯ ಅವಾಂತರ, ರೋಗಿ ಸಾವು; ಸಂಬಂಧಿಕರಿಂದ ಪ್ರತಿಭಟನೆ

ಬಿಮ್ಸ್ ಆಸ್ಪತ್ರೆಯ ಅವಾಂತರದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ರೋಗಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಸಂಬಂಧಿಕರು ಆರೋಪಿಸಿ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

Vijaya Karnataka Web 1 Apr 2021, 9:12 pm
ಬೆಳಗಾವಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಸ್ತಿ ಗ್ರಾಮದ ಮಹಿಳೆಯೊಬ್ಬರು 8 ದಿನಗಳ ಹಿಂದೆ ಹೊಟ್ಟೆನೋವು ಮತ್ತು ಮೂತ್ರಕೋಶ ಸಮಸ್ಯೆ ಎಂದು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಬಂದ ಮಹಿಳಾ ರೋಗಿ ಸಾವಿಗೀಡಾಗಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಸಿವಿಲ್ ಆಸ್ಪತ್ರೆಗೆಯಲ್ಲಿ ತರಬೇತಿ ಪಡೆಯುತ್ತಿರುವ ವೈದ್ಯರನ್ನು ಚಿಕಿತ್ಸೆಗೆ ಬಿಟ್ಟು, ಡ್ಯೂಟಿ ಡಾಕ್ಟರ್ ಗಳು ನಿರ್ಲಕ್ಷ್ಯ ಮಾಡಿದ್ದೇ ಕಾರಣವಾಗಿದೆ ಎಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ಬಿಮ್ಸ್ ನಿರ್ದೇಶಕರನ್ನು ಭೇಟಿ ಮಾಡಿ ಕೂಡಲೇ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.

ಹೊಟ್ಟೆ ನೋವು ಮತ್ತು ಮೂತ್ರಕೋಶ ಸಮಸ್ಯೆಯಿಂದ ಬೆಳಗಾವಿ ಸಿವಿಲ್ ಆಸ್ಪತ್ರೆಗೆ 8 ದಿನಗಳ ಹಿಂದೆ ದಾಖಲಾಗಿದ್ದ ಮಹಿಳಾ ರೋಗಿಯೊಬ್ಬರು ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟರು. ಡ್ಯೂಟಿ ಡಾಕ್ಟರ್ ಗಳು ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಿ ತರಬೇತಿ ಪಡೆಯುತ್ತಿರುವ ವೈದ್ಯರನ್ನು ಚಿಕಿತ್ಸೆಗೆ ಬಿಟ್ಟದ್ದೇ ಸಾವಿಗೆ ಕಾರಣವಾಗಿದ್ದು, ಕೂಡಲೇ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಮಹಿಳೆಯ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ರೋಗಿಯ ಸಂಬಂಧಿ ಗಂಗಾಧರ ದೊಡ್ಡಮನಿ ಮಾತನಾಡಿ, ಕೋಟಿಗಟ್ಟಲೆ ಖರ್ಚು ಮಾಡಿ ಕಟ್ಟಡ ನಿರ್ಮಿಸುವ ಸಿವಿಲ್ ಆಸ್ಪತ್ರೆಯವರಿಗೆ ತುರ್ತು ನಿಗಾ ಘಟಕವೊಂದನ್ನು ತೆರೆಯಲು ದುಡ್ಡಿಲ್ಲ. ಅಡ್ಡಾಡುತ್ತ ಬರುತ್ತಿರುವ ರೋಗಿಗಳು ಹೆಣವಾಗಿ ಮನೆ ತಲುಪುತ್ತಿದ್ದಾರೆ. ಇದು ಮೊದಲ ಉದಾಹರಣೆ ಅಲ್ಲ, ಕೊನೆಯದು ಆಗಲಿಕ್ಕಿಲ್ಲ. ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ, ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಕರೆತಂದು ಇಲ್ಲಿ ಕೆಲಸಕ್ಕೆ ನೇಮಿಸುತ್ತಿದ್ದಾರೆ. ಹಾಗಾಗಿ ಸಮಸ್ಯೆ ಹೆಚ್ಚಿವೆ ಎಂದರು

ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ತಪ್ಪಿತಸ್ಥ ಡಾಕ್ಟರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಚಿವ ಡಾ.ಸುಧಾಕರ್ ಅವರಿಗೂ ಮನವಿ ಸಲ್ಲಿಸುತ್ತೇವೆ. ಆಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು.

ಈ ವೇಳೆ ಮೃತ ಮಹಿಳೆಯ ಸೋದರ ಸಂಬಂಧಿ ಅಶೋಕ ಮಾತನಾಡಿ, ಹೊಟ್ಟೆನೋವು, ಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದ ಸೋದರಿ ಅಡ್ಡಾಡುತ್ತ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರಾಮಾಗುತ್ತಾರೆ ಎಂದು ಹೇಳುತ್ತಲೇ ಇದ್ದ ಡಾಕ್ಟರ್ ಗಳು ಈಗ ಲಿವರ್ ಫೇಲ್, ಕಿಡ್ನಿ ಫೇಲ್ ಪಿತ್ತಕೋಶ ಕಾರ್ಯ ಮಾಡುತ್ತಿಲ್ಲ ಎಂದು ಕಥೆ ಕಟ್ಟುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಾಕ್ಟರ್ ಗಳು ಸರಿಯಾಗಿ ಯಾವುದಕ್ಕೂ ಸ್ಪಂದಿಸುವುದಿಲ್ಲ. ಡಾಕ್ಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ