ಆ್ಯಪ್ನಗರ

ಕಬ್ಬು ಬೆಳೆಗಾರರಿಗೆ ಹಳೆಯ ಪದ್ಧತಿಯಂತೆ ಹಣ ಸಂದಾಯ ಮಾಡಿ

ಹುಕ್ಕೇರಿ: ಸಹಕಾರಿ ಸಕ್ಕರೆ ಕಾರ್ಖಾನೆಗಳು ಉಳಿದು ಬೆಳೆಯಲು ಕಬ್ಬು ಪೂರೈಸಿದ ರೈತರಿಗೆ ಹಿಂದಿನ ಪದ್ಧತಿಯಂತೆ ಮೂರು ಹಂತದಲ್ಲಿ ಖಾತೆಗಳಿಗೆ ಹಣ ಜಮಾ ಮಾಡಬೇಕು ...

Vijaya Karnataka 23 Sep 2018, 5:00 am
ಹುಕ್ಕೇರಿ: ಸಹಕಾರಿ ಸಕ್ಕರೆ ಕಾರ್ಖಾನೆಗಳು ಉಳಿದು ಬೆಳೆಯಲು ಕಬ್ಬು ಪೂರೈಸಿದ ರೈತರಿಗೆ ಹಿಂದಿನ ಪದ್ಧತಿಯಂತೆ ಮೂರು ಹಂತದಲ್ಲಿ ಖಾತೆಗಳಿಗೆ ಹಣ ಜಮಾ ಮಾಡಬೇಕು ಎಂದು ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
Vijaya Karnataka Web BEL-22 HUKKERI 01


ಅವರು ತಾಲೂಕಿನ ಹಿಡಲ್‌ ಡ್ಯಾಂ ಹೊರವಲಯದ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ರೈತರ ಗಮನ ಸೆಳೆಯಲು ಒಂದೇ ಬಾರಿಗೆ ಹಣ ಪಾವತಿಸಿ ನಷ್ಟ ಅನುಭವಿಸಿ ರೈತರ ಹಣ ನೀಡದೆ ಮುಚ್ಚಿದ ಹಲವಾರು ಕಾರ್ಖಾನೆಗಳು ರೈತರ ಮುಂದೆ ನಿದರ್ಶನಗಳಿವೆ ಎಂದರು

ಬೆಳಗಾವಿ ಲೀಡ್‌ ಬಿಡಿಸಿಸಿಸಿ ಬ್ಯಾಂಕ್‌ ನೇತೃತ್ವದಲ್ಲಿ ಮಂಗಳೂರು, ವಿಜಯಪುರ, ಬಾಗಲಕೋಟ ಬ್ಯಾಂಕ್‌ಗಳ ಸಹಕಾರದಿಂದ 75 ಕೋಟಿ ರೂ. ಸಾಲ ಪಡೆದು ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. 2019ರ ಜನವರಿಯಲ್ಲಿ 1.50 ಲಕ್ಷ ಟನ್‌ ಕಬ್ಬು ನುರಿಸುವ ಮೂಲಕ ಪ್ರಥಮ ಹಂತದ ಚಾಲನೆ ನೀಡಲಾಗುವುದು ಎಂದರು.

ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಕಾರ್ಖಾನೆ ಪ್ರಾರಂಭದ ಬಗ್ಗೆ ರೈತರ ನಂಬಿಕೆ ಕಳೆದುಕೊಂಡಿರುವುದಕ್ಕೆ ಜೀವ ತುಂಬುವುದರಲ್ಲಿ ಶಾಸಕ ಉಮೇಶಕ ಕತ್ತಿ, ಹಾಗೂ ರಮೇಶ ಕತ್ತಿ ಸಹೋದರರ ಪಾತ್ರ ಮುಖ್ಯವಾಗಿದೆ ಎಂದರು.

ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಅಧ್ಯಕ್ಷ ತೆ ವಹಿಸಿ ವರದಿ ಮಂಡಿಸಿ ಅನಮೋದನೆ ಪಡೆದರು. ವ್ಯವಸ್ಥಾಪಕ ಕೆ.ಎಲ್‌. ಶ್ರೀನಿವಾಸ ನಡವಳಿಕೆಗಳನ್ನು ಮಂಡಿಸಿದರು. ನಿರ್ದೇಶಕ ಬಸಗೌಡ ಪಾಟೀಲ, ಸ್ವಾಗತಿಸಿದರು. ನಿದೇರ್ಶಕರಾದ ಶಂಕರರಾವ ಭಾಂದುರ್ಗೆ, ಅಣ್ಣಾಸಾಹೇಬ ಪರ್ವತರಾವ, ಜಿ.ಎಂ.ಪಾಟೀಲ, ಅರ್ಜುನ ಪಾಟೀಲ, ಲಗಮಣ್ಣಾ ಕೆಂಪಮಲಕಾರಿ, ಶ್ರೀಮಂತ ಸನ್ನಾಯಿಕ, ರೈತ ಸದಸ್ಯರು ಉಪಸ್ಥಿತರಿದ್ದರು. ಉಮೇಶ ಪಾಟೀಲ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ