ಆ್ಯಪ್ನಗರ

ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಶಾಂತಿಯುತ ಮತದಾನ

ಬೆಳಗಾವಿ: ಜಿಲ್ಲೆಯಲ್ಲಿ ಬುಧವಾರ ನಡೆದ ಎರಡು ಪುರಸಭೆ (ಶೇ 9112) ಮತ್ತು ಐದು ಗ್ರಾಮ ಪಂಚಾಯಿತಿಗಳ (ಶೇ 72...

Vijaya Karnataka 30 May 2019, 5:00 am
ಬೆಳಗಾವಿ: ಜಿಲ್ಲೆಯಲ್ಲಿ ಬುಧವಾರ ನಡೆದ ಎರಡು ಪುರಸಭೆ (ಶೇ. 91.12) ಮತ್ತು ಐದು ಗ್ರಾಮ ಪಂಚಾಯಿತಿಗಳ (ಶೇ. 72.32) ಉಪಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆದಿವೆ.
Vijaya Karnataka Web peaceful voting in local governing bodies
ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಶಾಂತಿಯುತ ಮತದಾನ


ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆಯಲ್ಲಿ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಶೇ. 93.39 ಮತದಾನವಾಗಿದೆ. ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆ ಪುರಸಭೆ ಉಪ ಚುನಾವಣೆಯಲ್ಲಿ ಶೇ. 89.99 ಮತದಾನ ನಡೆದಿದೆ. ಎರಡೂ ಕ್ಷೇತ್ರದಲ್ಲಿ ಒಟ್ಟಾರೆ ಶೇ. 91.12 ರಷ್ಟು ಮತದಾನ ನಡೆದಿವೆ.

ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮ ಪಂಚಾಯಿತಿಯ ಪಟಗುಂದಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ. 79.59 ರಷ್ಟು, ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಪಂನ ಅರ್ಜುನವಾಡ ಕ್ಷೇತ್ರದಲ್ಲಿ ಶೇ. 77.75, ಕಮತನೂರು ಗ್ರಾಪಂನ ಕಮತನೂರು ಕ್ಷೇತ್ರದಲ್ಲಿ ಶೇ. 79.84, ಹೊಸೂರ ಗ್ರಾಪಂನ ನಿರ್ವಾನಹಟ್ಟಿ ಕ್ಷೇತ್ರದಲ್ಲಿ ಶೇ. 86.19 ಹಾಗೂ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಪಂನ ಪೀರನವಾಡಿ ಕ್ಷೇತ್ರದಲ್ಲಿ ಶೇ. 44.97 ಮತದಾನ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ