ಆ್ಯಪ್ನಗರ

ನಮಗೆ ಜನರೇ ಪ್ರಣಾಳಿಕೆ ನೀಡಬೇಕು

ಬೆಳಗಾವಿ : ಚುನಾವಣೆಯಲ್ಲಿ ನಾವು ಸುಳ್ಳು ಭರವಸೆಯ ಪ್ರಣಾಳಿಕೆ ನೀಡುವುದಿಲ್ಲ...

Vijaya Karnataka 12 Apr 2019, 5:00 am
ಬೆಳಗಾವಿ : ಚುನಾವಣೆಯಲ್ಲಿ ನಾವು ಸುಳ್ಳು ಭರವಸೆಯ ಪ್ರಣಾಳಿಕೆ ನೀಡುವುದಿಲ್ಲ. ಜನರೇ ಪ್ರಣಾಳಿಕೆ ನೀಡಬೇಕೆಂಬ ಕಾರಣಕ್ಕೆ ಖಾಲಿ ಪೇಪರ್‌ ನೀಡಲಾಗಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷ ದ ಸಂಸ್ಥಾಪಕ, ನಟ ಉಪೇಂದ್ರ ತಿಳಿಸಿದರು.
Vijaya Karnataka Web BEL-11 LBS 4


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ''ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಲು ನಾವು ರಾಜಕೀಯ ನಾಯಕರಲ್ಲ, ಸೇವಕರಲ್ಲ, ಕಾರ್ಮಿಕರು. ಜನ ಹೇಳಿದಂತೆ ಕೇಳುವ, ಕೆಲಸ ಮಾಡುವ ಕಾರ್ಮಿಕರು. ಹೀಗಾಗಿ ಜನರ ಪ್ರಣಾಳಿಕೆಯೊಂದಿಗೆ ಚುನಾವಣೆ ಎದುರಿಸುತ್ತೇವೆ'', ಎಂದರು.

''ರಾಜ್ಯದ 27 ಲೋಕಸಭಾ ಕ್ಷೇತ್ರಗಳಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳ್ಳಾರಿಯಲ್ಲಿ ಯಾವುದೇ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿಲ್ಲ'', ಎಂದ ಅವರು, ''ದೇಶದಲ್ಲಿರುವ ಜ್ವಲಂತ ಸಮಸ್ಯೆಗಳು ಇಷ್ಟು ವರ್ಷಗಳಿಂದ ಉಳಿದುಕೊಳ್ಳಲು ಇಲ್ಲಿಯವರೆಗೆ ಆಡಳಿತ ನಡೆಸಿದ ಸರಕಾರಗಳು ಕಾರಣ. ಜನಸಾಮಾನ್ಯರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಈ ರಾಜಕೀಯ ವ್ಯವಸ್ಥೆ ಬದಲಾಯಿಸಲು ಪಕ್ಷವನ್ನು ಹುಟ್ಟು ಹಾಕಿದ್ದೇವೆ'', ಎಂದರು.

ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣ ವಿಧಾನಸೌಧಗಳಲ್ಲಿ ಪ್ರಜೆಗಳಿಗೆ ಮುಕ್ತ ಅವಕಾಶ ಇಲ್ಲ. ಇವತ್ತಿಗೂ ಜನ ರಸ್ತೆಯಲ್ಲಿ ನಿಂತು ಸೌಧಗಳನ್ನು ನೋಡುವ ಪರಿಸ್ಥಿತಿ ಇದೆ. ಆದರೆ, ರಾಜಕಾರಣಿಗಳು ಸೌಧಗಳನ್ನು ವ್ಯಾಪಾರ ವಹಿವಾಟಿನ ಕೇಂದ್ರವನ್ನಾಗಿ ಮಾಡಿದ್ದಾರೆ.
- ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ