ಆ್ಯಪ್ನಗರ

ವ್ಯಕ್ತಿಗೆ ಚೂರಿ ಇರಿತ

ವೈಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ನಗರದಲ್ಲಿ ವ್ಯಕ್ತಿಯೋರ್ವನ ಮೇಲೆ ಚೂರಿ ಇರಿತ ನಡೆದಿದೆ...

Vijaya Karnataka 14 Dec 2019, 5:00 am
ಬೆಳಗಾವಿ: ವೈಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ನಗರದಲ್ಲಿವ್ಯಕ್ತಿಯೋರ್ವನ ಮೇಲೆ ಚೂರಿ ಇರಿತ ನಡೆದಿದೆ.
Vijaya Karnataka Web person stabbed
ವ್ಯಕ್ತಿಗೆ ಚೂರಿ ಇರಿತ


ನಗರದ ಚವಾಟ್‌ ಗಲ್ಲಿನಿವಾಸಿ ಬಸವರಾಜ ಸಿದ್ದಪ್ಪ ನೇಸರಗಿ (೪೨) ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ.

ಚವಾಟ ಗಲ್ಲಿಯಲ್ಲಿನಿಂತಿದ್ದ ಬಸವರಾಜ ಮೇಲೆ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಲ್ಲೆನಡೆಸಲಾಗಿದೆ. ಚೂರಿ ಇರಿತದಿಂದ ಗಾಯಗೊಂಡಿರುವ ಬಸವರಾಜನನ್ನು ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿದ್ದು ಗಾಯಾಳುವಿನ ಹೇಳಿಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಮಾರ್ಕೇಟ್‌ ಠಾಣೆ ಪೊಲೀಸರು ತಿಳಿಸಿದ್ದಾರೆ. ಮಾರ್ಕೇಟ್‌ ಠಾಣೆ ಪಿಐ ಶಿವಯೋಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ಕಾರಣದಿಂದ ಮುಂಜಾಗೃತ ಕ್ರಮವಾಗಿ ಚವಾಟ ಗಲ್ಲಿ, ಖಡೇ ಬಜಾರ ಮತ್ತು ಶೆಟ್ಟಿ ಗಲ್ಲಿಪ್ರದೇಶದಲ್ಲಿಅಂಗಡಿಗಳನ್ನು ಬಂದ್‌ ಮಾಡಿಸಲಾಗಿತ್ತು. ವೈಯಕ್ತಿಕ ವಿಷಯಗಳಿಗೆ ಹೊಡೆದಾಡಿಕೊಂಡಿದ್ದಾರೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲಎಂದು ಪಿಐ ಸಂಗಮೇಶ ಶಿವಯೋಗಿ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ