ಆ್ಯಪ್ನಗರ

ಪ್ಲಾಸ್ಟಿಕ್‌ ರಾಷ್ಟ್ರಧ್ವಜ ನಿಷೇಧಿಸುವಂತೆ ಒತ್ತಾಯ

ರಾಯಬಾಗ: ಮುಂಬರುವ ಸ್ವಾತಂತ್ರ್ಯೋತ್ಸವದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ರಾಷ್ಟ್ರಧ್ವಜದ ಮಾರಾಟ ನಿಷೇಧಿಸಿ ರಾಷ್ಟ್ರಧ್ವಜಕ್ಕಾಗುವ ಅವಮಾನವನ್ನು ತಡೆಯಬೇಕು ...

Vijaya Karnataka 9 Aug 2018, 5:00 am
ರಾಯಬಾಗ: ಮುಂಬರುವ ಸ್ವಾತಂತ್ರ್ಯೋತ್ಸವದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ರಾಷ್ಟ್ರಧ್ವಜದ ಮಾರಾಟ ನಿಷೇಧಿಸಿ ರಾಷ್ಟ್ರಧ್ವಜಕ್ಕಾಗುವ ಅವಮಾನವನ್ನು ತಡೆಯಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ನಾನಾ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪಟ್ಟಣದ ರಾಯಬಾಗ ತಹಸೀಲ್ದಾರ್‌ ಡಿ.ಎಸ್‌. ಜಮಾದಾರ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-8 RAIBAG1PHOTO1


ರಾಷ್ಟ್ರಧ್ವಜಕ್ಕಾಗುವ ಅವಮಾನ ತಡೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಆದೇಶ ಹಾಗೂ ರಾಜ್ಯ ಸರಕಾರದ ಪ್ಲಾಸ್ಟಿಕ್‌ ನಿಷೇಧದ ನಿರ್ಣಯವನ್ನು ಈ ಸಂದರ್ಭದಲ್ಲಿ ಪರಿಗಣಿಸಬೇಕು. ರಾಷ್ಟ್ರಧ್ವಜಕ್ಕಾಗಬಹುದಾದ ಅವಮಾನ ತಡೆಗಾಗಿ ಕೃತಿ ಸಮಿತಿ ರಚಿಸಿ ಸಮಿತಿಯಲ್ಲಿ ಹಿಂದೂ ಜನ ಜಗೃತಿ ಸಮಿತಿಯನ್ನೂ ಸೇರಿಸಿಕೊಳ್ಳಬೇಕು. ಪ್ಲಾಸ್ಟಿಕ್‌ ಧ್ವಜ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಮಿತಿ ಹೊರತಂದಿರುವ ಡಿವಿಡಿಯನ್ನು ಎಲ್ಲ ಚಿತ್ರಮಂದಿರದಲ್ಲಿ ಹಾಗೂ ಎಲ್ಲ ಚಾನಲ್‌ಗಳಲ್ಲಿ ಪ್ರಸಾರ ಮಾಡಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಈ ವೇಳೆ ಜಯದೀಪ ದೇಸಾಯಿ, ಸಿದ್ದು ದೇಸಾಯಿ, ಡಾ. ಅಪ್ಪಾಸಾಬ ಸುತಾರ, ಜಯಕುಮಾರ ಪಾಟೀಲ, ರಾಖಿ ಬೆಳಗಾಂವಕರ, ಶ್ರೀನಾಥ ಜಾಧವ, ಪರಶುರಾಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ