ಆ್ಯಪ್ನಗರ

ಪ್ರಿಂಟ್‌ ಮೀಡಿಯಾ ತಂಡಕ್ಕೆ ಪೊಲೀಸ್‌ ಟ್ರೋಫಿ

ಬೆಳಗಾವಿ: ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲಿ ಅದ್ಭುತ ...

Vijaya Karnataka 11 Feb 2020, 5:00 am
ಬೆಳಗಾವಿ: ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲಿಅದ್ಭುತ ಪ್ರದರ್ಶನ ನೀಡಿದ ಬೆಳಗಾವಿ ಪ್ರಿಂಟ್‌ ಮೀಡಿಯಾ ತಂಡ ಈ ವರ್ಷದ ನಗರ ಪೊಲೀಸ್‌ ಆಯುಕ್ತಾಲಯ ಕ್ರಿಕೆಟ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
Vijaya Karnataka Web 10PRAMOD3085359
ಬೆಳಗಾವಿ ಪೊಲೀಸ್‌ ಕಮಿಷನರೇಟ್‌ ಟ್ರೋಫಿ ಸ್ವೀಕರಿಸುತ್ತಿರುವ ಬೆಳಗಾವಿ ಪ್ರಿಂಟ್‌ ಮೀಡಿಯಾ ತಂಡ. ಐಜಿಪಿ ರಾಘವೇಂದ್ರ ಸುಹಾಸ್‌, ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿಗಳಾದ ಸೀಮಾ ಲಾಟ್ಕರ್‌, ಯಶೋಧಾ ವಂಟಗುಡೆ ಇದ್ದರು.


ಜಿಲ್ಲಾ ಪೊಲೀಸ್‌ ಮೈದಾನದಲ್ಲಿಸೋಮವಾರ ನಡೆದ ಫೈನಲ… ಪಂದ್ಯದಲ್ಲಿಪ್ರಿಂಟ್‌ ಮೀಡಿಯಾ ತಂಡ ಎಸ್‌ಪಿ ಇಲವೆನ್‌ ತಂಡವನ್ನು 29 ರನ್‌ಗಳ ಅಂತರದಲ್ಲಿಮಣಿಸುವ ಮೂಲಕ ಭರ್ಜರಿ ಜಯ ಸಾಧಿಸಿತು. ಪ್ರಬಲ ಪೈಪೋಟಿ ನೀಡಿದ ಎಸ್‌ಪಿ ಇಲವೆನ್‌ ತಂಡ ರನ್ನರ್‌ ಅಪ್‌ ಪ್ರಶಸ್ತಿಗೆ ಭಾಜನವಾಯಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಪ್ರಿಂಟ್‌ ಮೀಡಿಯಾ ತಂಡ ನಿಗದಿತ 12 ಓವರ್‌ಗಳಲ್ಲಿ102 ರನ್‌ ಗಳಿಸಿತ್ತು. ಅಮಿತ ಗಸ್ತಿ 47 ರನ್‌ಗಳಿಸಿದರು. ಇವರ ಆಟದಲ್ಲಿಸಿಕ್ಸರ್‌, ಬೌಂಡರಿಗಳೇ ಹೆಚ್ಚಿದ್ದವು. ಬೃಹನ್‌ ರನ್‌ ಬೆನ್ನತ್ತಿದ ಎಸ್‌ಪಿ ಇಲವೆನ್‌ ತಂಡ 12 ಓವರ್‌ಗಳಲ್ಲಿ9 ವಿಕೆಟ್‌ಗೆ 73 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಪ್ರಿಂಟ್‌ ಮೀಡಿಯಾ ತಂಡದ ಪಾರೀಶ ಬೋಸಲೆ ಅತ್ಯುತ್ತಮ ಬೌಲರ್‌ ಬಹುಮಾನ ಪಡೆದರು. ಎಸ್‌ಪಿ ಇಲವೆನ್‌ ತಂಡದ ಮಂಜುನಾಥ ಕಾತ್ರಾಳ ಉತ್ತಮ ಬ್ಯಾಟ್ಸಮನ್‌ ಬಹುಮಾನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ