ಆ್ಯಪ್ನಗರ

ಅಭಿವೃದ್ಧಿಯಲ್ಲಿರಾಜಕೀಯ ಬೆರೆಸುವುದು ಸರಿಯಲ್ಲ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ...

Vijaya Karnataka 5 Jan 2020, 5:00 am
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಬೇಕೆನ್ನುವ ನನ್ನ ಸಂಕಲ್ಪದಲ್ಲಿಯಾವುದೇ ಹಿಂಜರಿಕೆ ಇಲ್ಲ. ಅಭಿವೃದ್ಧಿ ವಿಷಯದಲ್ಲಿ ಸಹಕಾರವೇ ಮುಖ್ಯ ಹೊರತು ಯಾರೂ ರಾಜಕಾರಣ ಮಾಡಬಾರದು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿದರು.
Vijaya Karnataka Web 4LAXMI074754
ಹಿಂಡಲಗಾ-ಬಾಚಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌.


3.65 ಕೋಟಿ ರೂ.ವೆಚ್ಚದಲ್ಲಿಶನಿವಾರ ತಾಲೂಕಿನ ಹಿಂಡಲಗಾ-ಬಾಚಿ ರಸ್ತೆಯ 8 ಕಿಮೀ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಾಗೂ ಅಭಿವೃದ್ಧಿ ಕಾಣದ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು, ಲೋಕೋಪಯೋಗಿ ಇಲಾಖೆಯ ವತಿಯಿಂದ 3.65 ಕೋಟಿ ರೂ. ಗಳ ವೆಚ್ಚದಲ್ಲಿಈ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ನಂತರ ನಾವೆಲ್ಲರೂ ಜನಪ್ರತಿನಿಧಿಗಳು. ಜನರ ಸೇವೆಯಷ್ಟೇ ನಮ್ಮ ಧ್ಯೇಯವಾಗಿರಬೇಕು. ಸರಕಾರ ಯಾವುದೇ ಬಂದರೂ ಪಕ್ಷ ಭೇದ ಮಾಡದೆ ಎಲ್ಲಕ್ಷೇತ್ರಗಳಿಗೂ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರದಂತಹ ಅತ್ಯಂತ ಹಿಂದುಳಿದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಈ ಕ್ಷೇತ್ರ ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಯೋಜನೆಗಳಿಂದ ವಂಚಿತವಾಗಿತ್ತು. ಹಾಗಾಗಿ ಸಹಜವಾಗಿ ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂದು ಸರಕಾರವನ್ನು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ಯುವರಾಜ ಕದಂ, ಜಿಪಂ ಸದಸ್ಯೆ ಮಾಧುರಿ ಹೆಗಡೆ, ಗ್ರಾಪಂ ಸದಸ್ಯರಾದ ಚೇತನ ಅಷ್ಟಗೇಕರ್‌, ರಾಮಚಂದ್ರ ಕುದ್ರೆಮನಿಕರ್‌, ವಿಠ್ಠಲ ದೇಸಾಯಿ, ಮಿಥುನ ಉಸೂಲಕರ್‌, ವಿಠ್ಠಲ ಬೆಳಗಾಂವಕರ್‌, ಕೃಷ್ಣ ಪಾವಸೆ, ಪ್ರಕಾಶ ಬೆಳಗಾಂವPರ್‌ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ