ಆ್ಯಪ್ನಗರ

ಕೈದಿಗಳ ಕೈಯಲ್ಲಿ ಅರಳಿದ ಪೂಜಾ ಸಾಹಿತ್ಯ

ಇಚಲಕರಂಜಿ: ಕೊಲ್ಲಾಪುರದ ಕಳಂಬಾ ಕಾರಾಗೃಹದಲ್ಲಿ ದೀಪಾವಳಿ ಪ್ರಯುಕ್ತ ಕೈದಿಗಳಿಂದ ತಯಾರಿಸಲಾದ ಪೂಜಾ ಸಾಹಿತ್ಯಗಳು, ಬಟ್ಟೆ, ಮಕ್ಕಳ ಆಟದ ಪರಿಕರಗಳು, ಕೈಚೀಲ, ...

Vijaya Karnataka 6 Nov 2018, 5:00 am
ಇಚಲಕರಂಜಿ : ಕೊಲ್ಲಾಪುರದ ಕಳಂಬಾ ಕಾರಾಗೃಹದಲ್ಲಿ ದೀಪಾವಳಿ ಪ್ರಯುಕ್ತ ಕೈದಿಗಳಿಂದ ತಯಾರಿಸಲಾದ ಪೂಜಾ ಸಾಹಿತ್ಯಗಳು, ಬಟ್ಟೆ, ಮಕ್ಕಳ ಆಟದ ಪರಿಕರಗಳು, ಕೈಚೀಲ, ರೆಡಿಮೇಡ್‌ ಡ್ರೆಸ್‌ ಮಟೀರಿಯಲ್‌ ಸೇರಿದಂತೆ ಅನೇಕ ವಸ್ತುಗಳಿಗೆ ಭಾರೀ ಬೇಡಿಕೆ ಬರುತ್ತಿದೆ. ಮೂರು ದಿನಗಳಲ್ಲಿ 3.30 ಲಕ್ಷ ರೂ.ಗಳ ವಸ್ತು ಮಾರಾಟವಾಗಿರುವುದಾಗಿ ಕಾರಾಗೃಹದ ಅಧೀಕ್ಷ ಕ ಶರದ ಶೇಳಕೆ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
Vijaya Karnataka Web BEL-5ICH3


ಕಾರಾಗೃಹದಲ್ಲಿ ಭಾಗೀರಥಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಅರುಂಧತಿ ಮಹಾಡಿಕ ಕೈದಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ದೀಪಾವಳಿ ಮಾರಾಟ ಮೇಳ ಉದ್ಘಾಟಿಸಿದ್ದಾರೆ. ಐದು ವರ್ಷಗಳಿಂದ ಕಾರಾಗೃಹದಲ್ಲಿ ದೀಪಾವಳಿ ಮಾರಾಟ ಮೇಳ ನಡೆಸಲಾಗುತ್ತಿದೆ. ಈ ಮೇಳದಿಂದ ಕೈದಿಗಳಲ್ಲಿನ ಸುಪ್ತ ಗುಣಗಳನ್ನು ಪ್ರದರ್ಶಿಸಲಾಗುತ್ತಿದ್ದು ಗ್ರಾಹಕರಿಂದಲೂ ಒಳ್ಳೆಯ ಸಹಕಾರ ದೊರೆಯುತ್ತಿದೆ ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ