ಆ್ಯಪ್ನಗರ

ಬಡವಳ ಮನೆಗೆ ಬಂತು ವಿದ್ಯುತ್‌ ಬೆಳಕು

ಚನ್ನಮ್ಮನ ಕಿತ್ತೂರು: ವೀರಾಪುರ ಗ್ರಾಮದ ರತ್ನವ್ವ ಮರಕಟ್ಟಿ ಅವರ ಮನೆಗೆ ಕೊನೆಗೂ ವಿದ್ಯುತ್‌ ...

Vijaya Karnataka 1 Sep 2019, 5:00 am
ಚನ್ನಮ್ಮನ ಕಿತ್ತೂರು: ವೀರಾಪುರ ಗ್ರಾಮದ ರತ್ನವ್ವ ಮರಕಟ್ಟಿ ಅವರ ಮನೆಗೆ ಕೊನೆಗೂ ವಿದ್ಯುತ್‌ ಸಂಪರ್ಕ ಲಭ್ಯವಾಗಿ ಅವರ ಮಕ್ಕಳು ಬೆಳಕಿನಲ್ಲಿಓದುವಂತಾಗಿದೆ.
Vijaya Karnataka Web BEL-31 KITTUR PHOTO 1


19 ವರ್ಷಗಳ ಹಿಂದೆ ಮನೆಯ ವಿದ್ಯುತ್‌ ಕಡಿತಗೊಂಡು ಕತ್ತಲೆಯಲ್ಲೇ ಇಬ್ಬರು ಮಕ್ಕಳೊಂದಿಗೆ ರತ್ನವ್ವ ಬದುಕು ಸಾಗಿಸುತ್ತಿದ್ದರು. ಇವರ ಜೀವನ ವ್ಯಥೆಯ ಕುರಿತು ಆ. 30ರಂದು 'ವಿಕ' ಪತ್ರಿಕೆ ವರದಿ ಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿದ ಹೆಸ್ಕಾಂ ಅಧಿಕಾರಿ ಎಮ್‌.ಕೆ. ಹಿರೇಮಠ ಅವರು ಮಹಿಳೆಯನ್ನು ಶನಿವಾರ ಇಲ್ಲಿನ ತಮ್ಮ ಕಚೇರಿಗೆ ಕರೆಯಿಸಿಕೊಂಡು ಎಲ್ಲದಾಖಲೆಗಳ ಪ್ರತಿಗಳನ್ನು ಪಡೆದು ತಕ್ಷಣ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಸಿಬ್ಬಂದಿಗೆ ಆದೇಶಿಸಿದರು. ಅಲ್ಲದೇ ವಿದ್ಯುತ್‌ ಸಂಪರ್ಕಕ್ಕೆ ಬೇಕಾದ ಎಲ್ಲಖರ್ಚು ವೆಚ್ಚಗಳನ್ನು ತಾವೇ ಭರಿಸುವದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ರಾಣಿ ಚನ್ನಮ್ಮ ನವಭಾರತ ಸೈನ್ಯದ ರಾಜ್ಯಾಧ್ಯಕ್ಷ ಕನ್ನಡ ನಜೀರ ಅವರು ತಮ್ಮ ಸಂಘಟನೆಯ ಜಿಲ್ಲಾಧ್ಯಕ್ಷ ಜಗದೀಶ ಕಡೋಲಿ ಮೂಲಕ 2 ಸಾವಿರ ರೂ. ಗಳನ್ನು ಮನೆಗೆ ವಿದ್ಯುತ್‌ ಸಲಕರಣೆಗಳ ಖರೀದಿಸಲು ಮಹಿಳೆಗೆ ತಲುಪಿಸಿದರು.

ಹೆಸ್ಕಾಂ ಅಧಿಕಾರಿಗಳ ಸಹಕಾರಕ್ಕೆ ಹಾಗೂ ರಾಣಿ ಚನ್ನಮ್ಮ ನವಭಾರತ ಸೈನ್ಯದ ರಾಜ್ಯಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿರುವ ರತ್ನವ್ವ, ತಮ್ಮ ಮಕ್ಕಳು ಬೆಳಕಿನಲ್ಲಿವಿದ್ಯಾಭ್ಯಾಸ ಮಾಡುವಂತಾಗಿರುವುದೇ ತಮಗೆ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ