ಆ್ಯಪ್ನಗರ

ನಾಡವಿರೋಧಿಗಳಿಂದ ಮಹಾಮೇಳಾವ್‌ಗೆ ಸಿದ್ಧತೆ

Vijaya Karnataka 13 Nov 2017, 5:00 am

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ನಡೆದಾಗಲೆಲ್ಲ ಮಹಾ ಮೇಳಾವ್‌ ಹೆಸರಿನಲ್ಲಿ ನಾಡ ವಿರೋಧಿ ಚಟುವಟಿಕೆ ನಡೆಸುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಈ ಬಾರಿಯೂ ಅಂಥದ್ದೇ ಕೃತ್ಯದ ತಯಾರಿ ನಡೆಸಿದೆ. ಜಿಲ್ಲಾಡಳಿತ ಪರವಾನಗಿ ನೀಡಿದರೆ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಮಹಾಮೇಳಾವ್‌ ನಡೆಯಲಿದೆ.

ಭಾನುವಾರ ಪೆಂಡಾಲ್‌ ಸಾಮಗ್ರಿಯನ್ನು ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ತಂದಿಟ್ಟುಕೊಂಡಿರುವ ಎಂಇಎಸ್‌ ಕಾರ್ಯಕರ್ತರು ಅಲ್ಲಿಯೇ ಬೀಡುಬಿಟ್ಟಿದ್ದಾರೆ. ಸಂಜೆ ಇಲ್ಲವೇ ತಡರಾತ್ರಿಯಷ್ಟೊತ್ತಿಗೆ ಮಹಾಮೇಳಾವ್‌ಗೆ ಅನುಮತಿ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಮಹಾಮೇಳಾವ್‌ನಲ್ಲಿ ಪಾಲ್ಗೊಳ್ಳುವಂತೆ ಎನ್‌ಸಿಪಿ ನಾಯಕರಿಗೆ ನಿರ್ದೇಶನ ನೀಡುವುದಾಗಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಹೇಳಿದ್ದಾರೆ ಎಂದು ಹೇಳಲಾಗಿದ್ದು ಎಂಇಎಸ್‌ ನಾಯಕರಿಗೆ ಹುರುಪು ಬಂದಿದೆ. ಎಂಇಎಸ್‌ನವರು ಹೇಳಿಕೊಂಡಂತೆ ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷದ ನಾಯಕ ಧನಂಜಯ ಮುಂಡೆ, ಮಾಜಿ ಸಚಿವ ಜಯಂತರಾವ್‌ ಪಾಟೀಲ, ಸಂಸದ ಧನಂಜಯ ಮಾನೆ, ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗಡಿ ದಾವೆ ಸಮನ್ವಯಕಾರ ಚಂದ್ರಕಾಂತದಾದಾ ಪಾಟೀಲ, ಕೇಂದ್ರದ ಮಾಜಿ ಸಚಿವ ಎನ್‌.ಡಿ. ಪಾಟೀಲ, ಆಜ್ರಾ ಶಾಸಕ ಕೆ.ಪಿ. ಪಾಟೀಲ, ಶಿವಸೇನೆ ನಾಯಕ ಅಂಬಿಟ್ಕರ್‌ ಮತ್ತು ಇತರರು ಮಹಾಮೇಳಾವ್‌ದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತಿರುವ ಆಡಳಿತ ಸೂಕ್ತ ಬಂದೋಬಸ್ತ್‌ಗೆ ಕ್ರಮ ಕೈಗೊಂಡಿದೆ. ವ್ಯಾಕ್ಸಿನ್‌ ಡಿಪೋ ಮೈದಾನ ಪ್ರದೇಶದಲ್ಲಿ ಭಾನುವಾರದಿಂದಲೇ ಭದ್ರತೆಗೆ ಹೆಚ್ಚಿನ ಪೊಲೀಸ್‌ ಬಲ ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳು ಪ್ರತಿಕ್ಷಣದ ಬೆಳವಣಿಗೆಯ ಮಾಹಿತಿ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ