ಆ್ಯಪ್ನಗರ

32 ಮರಗಳ ಮರುನಾಟಿಗೆ ಸಿದ್ಧತೆ

ಬೆಳಗಾವಿ: ನಗರದ ಬಾಕ್ಸೈಟ್‌ ರಸ್ತೆ ಕಾಮಗಾರಿ ವೇಳೆ ತೆರವುಗೊಳ್ಳಲಿರುವ 32 ಮರಗಳ ಮರುನಾಟಿಗೆ ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿದೆ...

Vijaya Karnataka 5 May 2019, 5:00 am
ಬೆಳಗಾವಿ : ನಗರದ ಬಾಕ್ಸೈಟ್‌ ರಸ್ತೆ ಕಾಮಗಾರಿ ವೇಳೆ ತೆರವುಗೊಳ್ಳಲಿರುವ 32 ಮರಗಳ ಮರುನಾಟಿಗೆ ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿದೆ.
Vijaya Karnataka Web BLG-0405-2-52-4RAJU-1


32 ಮರಗಳಲ್ಲಿ 25 ಅರಳಿ, 2 ಆಲ, 3 ಕಲಬಸರಿ ಮತ್ತು 2 ಗೋಣಿ ಮರಗಳು ಇವೆ. ಇವು ಮೂಲತಃ ಅರಣ್ಯ ಇಲಾಖೆಗೆ ಸೇರಿವೆ. ಆದರೆ, ಮರುನಾಟಿ ಹೊಣೆಯನ್ನು ರಸ್ತೆ ಕಾಮಗಾರಿ ನಡೆಸಿರುವ ಲೋಕೋಪಯೋಗಿ ಇಲಾಖೆಗೆ ವಹಿಸಿದೆ.

ಈಗಾಗಲೇ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸಿ ಬೇರುಗಳ ಸುತ್ತಲೂ ಅಗೆತ ಮಾಡಿ, ಬೇರು ವ್ಯಾಪ್ತಿಯ ಮಣ್ಣು ಚದುರಿ ಗಿಡಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಗೋಣಿಚೀಲಗಳ ತಟ್ಟಿನಿಂದ ಬಿಗಿದಿದೆ. 15-20 ದಿನಗಳಲ್ಲಿ ಈ ಮರಗಳು ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಲೋಕೋಪಯೋಗಿ ಇಲಾಖೆ ಮರುನಾಟಿಗೆ ಬೇಕಿರುವ ಸ್ಥಳಗಳನ್ನು ಗುರುತಿಸತೊಡಗಿದೆ. ಅರಣ್ಯ ಸಂರಕ್ಷಣಾ ಸಲಹಾ ಸಮಿತಿ ಸದಸ್ಯರೂ ಆಗಿರುವ ಸುಪರಿಂಟೆಂಡೆಂಟ್‌ ಎಂಜಿನಿಯರ್‌ ಎಚ್‌. ಸುರೇಶ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ ಸಂಜೀವಕುಮಾರ ಹುಲಕಾಯಿ ಅವರ ನೇತೃತ್ವದಲ್ಲಿ ಸಹಾಯಕ ಕಾರ್ಯಕಾರಿ ಅಭಿಯಂತರ ಎಂ.ಬಿ. ಕುಲಕರ್ಣಿ, ಸಹಾಯಕ ಎಂಜಿನಿಯರ್‌ ಹಾಗೂ ಗ್ರೀನ್‌ಸೇವಿಯರ್‌ ಸಲಹಾ ಸಮಿತಿ ಸದಸ್ಯ ಎಸ್‌.ಕೆ. ಎಂಟೆತ್ತಿನವರ್‌ ಈ ಕಾರ್ಯದಲ್ಲಿ ತೊಡಗಿದ್ದಾರೆ.

ಇದು ನಮಗೆ ಹೊಸ ಅನುಭವ. ಜಿಲ್ಲೆಯಲ್ಲಿ ಈ ಹಿಂದೆ ಇಂಥ ಪ್ರಯೋಗ ನಡೆದಿಲ್ಲ. ಅದು ನಮ್ಮ ಇಲಾಖೆಯಿಂದ ನಡೆಯುತ್ತಿರುವ ಬಗ್ಗೆ ಖುಷಿ ಮತ್ತು ಕುತೂಹಲ ಎರಡೂ ಇದೆ. ಈ ತಿಂಗಳಲ್ಲಿ ನಿಗದಿತ ಗಿಡಗಳನ್ನು ಸ್ಥಳಾಂತರಿಸಿ ಮರುನಾಟಿ ಮಾಡುತ್ತೇವೆ.
-ಸಂಜೀವಕುಮಾರ ಹಲಕಾಯಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಸಂಜೀವಕುಮಾರ ಹುಲಕಾಯಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ