ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಆಗ್ರಹ

ಚಿಕ್ಕೋಡಿ: ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕದಿಂದ ವಿಧಾನ ಸಭೆ ಮುಖ್ಯ ಸಚೇತಕ ...

Vijaya Karnataka 6 Sep 2018, 5:00 am
ಚಿಕ್ಕೋಡಿ: ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕದಿಂದ ವಿಧಾನ ಸಭೆ ಮುಖ್ಯ ಸಚೇತಕ ಗಣೇಶ ಹುಕ್ಕೇರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
Vijaya Karnataka Web BEL-5CKD4


ಪ್ರಾಥಮಿಕ ಶಾಲಾ ಪದವೀಧರ ಶಿಕ್ಷ ಕರಿಗೆ ಬಡ್ತಿಗಾಗಿ ನಿಗದಿಗೊಳಿಸಿರುವ ಪರೀಕ್ಷೆಯನ್ನು ರದ್ದುಗೊಳಿಸಿ, ಪ್ರಾಥಮಿಕ ಶಾಲಾ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು ಎಲ್ಲಾ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷ ಕರನ್ನು ಪದವೀಧರ ಶಿಕ್ಷ ಕರೆಂದು ಪರಿಗಣಿಸಿ ಬಡ್ತಿ ನೀಡಬೇಕು. ದೈಹಿಕ ಶಿಕ್ಷ ಕರ ವೃಂದ ಬದಲಾಯಿಸಿ ಅವರಿಗೂ ಬಡ್ತಿ ಅವಕಾಶ ನೀಡಬೇಕು. ಸೇರಿದಂತೆ 2 ವರ್ಷದಿಂದ ಸ್ಥಗಿತಗೊಂಡಿರುವ ಶಿಕ್ಷ ಕರ ವರ್ಗಾವಣೆ ಪ್ರಕ್ರಿಯೆಯನ್ನು ವೇಳಾಪಟ್ಟಿಯಂತೆ ತಕ್ಷ ಣ ಪ್ರಾರಂಭಿಸಿ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಶಿಕ್ಷ ಕರ ವರ್ಗಾವಣೆ ವಿಷಯದಲ್ಲಿ ಶಿಕ್ಷ ಕರು ನಂಬಿಕೆ ಕಳೆದುಕೊಂಡಿದ್ದು, ವಿಶೇಷವಾಗಿ ಅಂತರ್‌ ಜಿಲ್ಲೆಗೆ ವರ್ಗಾವಣೆ ಬಯಸುವ ಶಿಕ್ಷ ಕರು ಸುಮಾರು ವರ್ಷಗಳಿಂದ ತಮ್ಮ ಕುಟುಂಬಗಳಿಂದ ದೂರದಲ್ಲಿದ್ದಾರೆ. ನೋವಿನಲ್ಲಿರುವ ವರ್ಗಾವಣೆ ಆಕಾಂಕ್ಷಿಗಳ ಭಾವನೆ ಅರ್ಥ ಮಾಡಿಕೊಂಡು ತಕ್ಷ ಣ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು ಒತ್ತಾಯಿಸಿದರು.

ನೂತನ ಪಿಂಚಣಿ ಯೋಜನೆ ಸಂಪೂರ್ಣ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಶಿಕ್ಷ ಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್‌.ಎಂ.ಲೋಕಣ್ಣವರ, ಸಿ.ಬಿ.ಅರಬಾವಿ, ಎಸ್‌.ಎಸ್‌.ಧೂಪದಾಳ, ವಿ.ಎಸ್‌.ಖೋತ, ಎನ್‌.ಜಿ.ಪಾಟೀಲ, ಜಿ.ಎಂ.ಕಾಂಬಳೆ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ