ಆ್ಯಪ್ನಗರ

ಆಡಳಿತ ಮಂಡಳಿ ಅಸಹಕಾರದಿಂದ ಭರವಸೆ ಈಡೇರಲಿಲ್ಲ

ಬೈಲಹೊಂಗಲ: ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಸೆ...

Vijaya Karnataka 9 Sep 2018, 5:00 am
ಬೈಲಹೊಂಗಲ: ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಸೆ. 30ರಂದು ನಡೆಯಲಿರುವ ಚುನಾವಣೆಯಲ್ಲಿ ಹೊಸ ಪೆನೆಲ್‌ನೊಂದಿಗೆ ಸ್ಪರ್ಧೆಗೆ ಇಳಿಯಲಿದ್ದೇನೆಂದು ಹಿರಿಯ ಸಹಕಾರಿ ಧುರೀಣ, ಕಾರ್ಖಾನೆ ಸಂಸ್ಥಾಪಕರ ಪುತ್ರ ಬಸವರಾಜ ಬಾಳೇಕುಂದರಗಿ ಹೇಳಿದರು.
Vijaya Karnataka Web BEL-8HTP1


ಪಟ್ಟಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಈಗಿರುವ ಆಡಳಿತ ಮಂಡಳಿಯ ಅಸಹಕಾರವೇ ಕಾರಣ. ಸಹ ವಿದ್ಯುತ್‌ ಘಟಕ, ಕಬ್ಬು ಅರಿಯುವ ಸಾಮರ್ಥ್ಯ‌ ಹೆಚ್ಚಳ, ಡಿಸ್ಟಿಲರಿ ಘಟಕ ಸ್ಥಾಪನೆ, ಕಬ್ಬು ಕ್ಷೇತ್ರ ಅಭಿವೃದ್ಧಿ, ತುಂತುರ ಹನಿ ನೀರಾವರಿ ಘಟಕ, ಹೊಸ ತಳಿಯ ಕಬ್ಬು ಪರಿಚಯಿಸುವ ನನ್ನ ಕನಸಿಗೆ ಸಹೋದ್ಯೋಗಿ ಆಡಳಿತ ಮಂಡಳಿ ಕಲ್ಲು ಹಾಕಿತು. ಪ್ರತಿಯೊಂದಕ್ಕೂ ಚೌಕಾಸಿ ಮಾಡುತ್ತ ಬಹಳ ನೋವು ಉಂಟು ಮಾಡಿತು. ಈ ಕಾರಣಕ್ಕಾಗಿ ಹೊಸ ಟೀಂನೊಂದಿಗೆ ಚುನಾವಣೆಗೆ ಹೋಗುತ್ತಿದ್ದೇನೆ,'' ಎಂದರು.

ಒಟ್ಟು 17 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 9 ಸಾಮಾನ್ಯ ಸ್ಥಾನಗಳು, 2 ಮಹಿಳಾ, 2 ಅ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ, ಸಹಕಾರಿ ಸಂಸ್ಥೆಯಿಂದ ಒಂದು, ಕಬ್ಬು ಬೆಳೆಗಾರ ಅಲ್ಲದ ಒಬ್ಬ ಸದಸ್ಯರು ಟೀಂ ನಲ್ಲಿ ಇರಲಿದ್ದಾರೆ. ಸ್ಪರ್ಧಿಸಬಯಸುವವರು ತಮ್ಮನ್ನು ಪಟ್ಟಣದ ಮಹಾಲಕ್ಷ್ಮೀ ಬ್ಯಾಂಕಿನಲ್ಲಿ ಸೆ.10ರಿಂದ 12ರ ಭೇಟಿಯಾಗಬಹುದೆಂದು ಹೇಳಿದರು.

ಆರ್‌.ಎಸ್‌.ಕಾದ್ರೋಳ್ಳಿ, ರಾಜಶೇಖರ ಎತ್ತಿನಮನಿ, ವಿ.ಎಸ್‌.ಬಳಿಗಾರ, ಅಶೋಕ ಹುದ್ದಾರ, ಮಲ್ಲಪ್ಪ ಯರಿಕಿತ್ತೂರ, ಪಿ.ವಿ.ಮೂಗಬಸವ, ವಿ.ಜಿ.ಪಾಟೀಲ, ಮಹಾರುದ್ರಪ್ಪ ನೆಲ್ಲಿಗಣಿ, ಗಂಗಾಧರ ಹೊಂಡೇದ, ಅಶೋಕ ಬೆಳ್ಳಿವಾಲಿ, ಬಸವರಾಜ ರಾಚೋಟಿಮಠ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ