ಆ್ಯಪ್ನಗರ

ಸರಕಾರಗಳ ವಿಳಂಬ ನೀತಿ ಖಂಡಿಸಿ ಜ.8ರಿಂದ ಪ್ರತಿಭಟನೆ

ಗೋಕಾಕ : ರಾಜ್ಯದಲ್ಲಿ ಸರಕಾರ ನಡೆಸುವ ಯಾವುದೇ ಪಕ್ಷ ಗಳು ಅಂಗನವಾಡಿ ...

Vijaya Karnataka 11 Dec 2018, 5:00 am
ಗೋಕಾಕ : ರಾಜ್ಯದಲ್ಲಿ ಸರಕಾರ ನಡೆಸುವ ಯಾವುದೇ ಪಕ್ಷ ಗಳು ಅಂಗನವಾಡಿ ನೌಕರರ ಹಿತ ಕಾಯುವಲ್ಲಿ ಮೀನಾಮೇಷ ಎಣಿಸುತ್ತಿದ್ದು ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ. ಆದ್ದರಿಂದ ಹೋರಾಟದಿಂದಲೇ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಗ್ರಾಪಂ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಗೈಬುಸಾಬ ಜೈನೇಖಾನ ಹೇಳಿದರು.
Vijaya Karnataka Web BEL-10GOK6


ಶನಿವಾರ ನಗರದ ಬೀರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಗೋಕಾಕ ತಾಲೂಕಿನ ಅಂಗನವಾಡಿ ನೌಕರರ 4ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗನವಾಡಿ, ಗ್ರಾಪಂ, ಕಟ್ಟಡ ಕಾರ್ಮಿಕರು ಸೇರಿದಂತೆ ಹಲವಾರು ನೌಕರರಿಗೆ ಸುಪ್ರೀಂ ಕೋರ್ಟ್‌ ಆದೇಶದನ್ವಯ ಸಮಾನ ಕೆಲಸಕ್ಕೆ ಸಮಾನ ವೇತನದ ನೀಡಲು ಹಿಂದೇಟು ಹಾಕುತ್ತಿವೆ. ಇದನ್ನು ವಿರೋಧಿಸಿ ಜ. 8 ಹಾಗೂ 9ರಂದು ದೇಶಾದ್ಯಂತ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆಂದು ತಿಳಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜೇರಿ ಮಾತನಾಡಿ ನೌಕರರ ಬೇಡಿಕೆಗಳ ಬಗ್ಗೆ ಹಾಗೂ ಸಂಘಟನೆಯ ಮೂಲಕ ಆದ ಕೆಲಸಗಳ ಬಗ್ಗೆ ವಿವರವಾಗಿ ಹೇಳಿದರು. ತಾಲೂಕಾ ಮಟ್ಟದ ಅಂಗನವಾಡಿ ನೌಕರರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಆರ‍್ಯನ್ನವರ, ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಟಿ.ಎ.ಬಾಬಗೌಡ, ತಾಲೂಕಾಧ್ಯಕ್ಷ ಮಡ್ಡೆಪ್ಪ ಭಜಂತ್ರಿ. ಕಲ್ಲಪ್ಪ ಮಾದರ, ರಮೇಶ ಹೋಳಿ, ಮುಖಂಡರಾದ ಮಹೇಶ ಕರಣೂರೆ, ವಿದ್ಯಾ ಕಂಬಾರ, ಚನ್ನಮ್ಮ ಗಡಕರಿ, ಆಯಿಶಾ ದೇಸಾಯಿ, ಪ್ರವೀಣ ಶಿಪ್ರಿ ಹಾಗೂ ತಾಲೂಕಿನ ಎಲ್ಲ ಅಂಗನವಾಡಿ ನೌಕರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ