ಆ್ಯಪ್ನಗರ

ಹೆಸ್ಕಾಂ ಅಧಿಕಾರಿಗಳ ವಿರುದ್ಧದ ಧರಣಿ ಸತ್ಯಾಗ್ರಹ ತಾತ್ಕಾಲಿಕ ಸ್ಥಗಿತ

ಬೋರಗಾಂವ : ಸದಲಗಾ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಡೆಸಲಾಗುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ...

Vijaya Karnataka 20 Feb 2019, 5:00 am
ಬೋರಗಾಂವ : ಸದಲಗಾ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಡೆಸಲಾಗುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
Vijaya Karnataka Web BEL-19ICH4


ಸದಲಗಾ ಹೆಸ್ಕಾಂ ಕಾರ್ಯಾಲಯದಲ್ಲಿ ಕೆಲ ಅಧಿಕಾರಿಗಳು ಯಾವುದೇ ದಾಖಲೆಗಳನ್ನು ಪಡೆಯದೆ 63ಕೆವಿಎ ಟಿಸಿ ಯನ್ನು ಕಾನೂನು ಬಾಹಿರವಾಗಿ ಅಳವಡಿಸಿದ್ದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪಟ್ಟಣದ ಆರ್‌ಟಿಐ ಕಾರ್ಯಕರ್ತ ಮನೋಹರ ಹೆಗ್ರೆ ಸೇರಿದಂತೆ ಕೆಲ ಕಾರ್ಯಕರ್ತರು ಸದಲಗಾ ಹೆಸ್ಕಾಂ ಕಾರ್ಯಾಲಯದ ಎದುರು ಸೋಮವಾರ ಬೆಳಗ್ಗೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರು.

ಮಂಗಳವಾರ ಸಂಜೆ ಹುಬ್ಬಳ್ಳಿ ವಿಭಾಗದ ಅಧೀಕ್ಷ ಕ ಅಭಿಯಂತರರು ನೀಡಿದ ಲಿಖಿತ ಭರವಸೆಯನ್ನಾಧರಿಸಿ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದು ಮನೋಹರ ಹೆಗ್ರೆ ತಿಳಿಸಿದರು.

ಈ ಮಧ್ಯೆ ಆರೋಪಕ್ಕೆ ಗುರಿಯಾದ ಸದಲಗಾ ಉಪವಿಭಾಗ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ ಟಿ.ತವನಕ್ಕೆ, ಅಂದಿನ ಶಾಖಾಧಿಕಾರಿ ಎನ್‌.ಟಿ.ಪಾಟೀಲ ಹಾಗೂ ಬೇಡಕಿಹಾಳದ ಕ್ಯಾಂಪ ಲೈನ್‌ಮನ್‌ ಎ.ಎಸ್‌. ಕಂಬಾರರಿಗೆ ಚಿಕ್ಕೋಡಿ ವಿಭಾಗದ ಅಧೀಕ್ಷ ಕ ಅಭಿಯಂತರರು ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ಮಹೋಹರ ಹೆಗ್ರೆ ತಿಳಿಸಿದರು.

ಏಕವೀರಿ ಫೌಂಡೇಶನ್‌ ಅಧ್ಯಕ್ಷ ರಾಜಕುಮಾರ ಡಾಂಗೆ, ಸಂತೋಷ ನವಲೆ, ಹೇಮಂತ ಶಿಂಗೆ, ರಾವಸಾಬ ಮಲಾಳೆ, ಪುರಸಭಾ ಸದಸ್ಯ ಅಭಿಜಿತ್‌ ಪಾಟೀಲ, ಹೇಮಂತ ಶಿಂಗೆ, ಸಂಜು ಡಾಂಗೆ, ಅಜರುದ್ದೀನ್‌ ಶೇಖ್‌, ಪಂಕಜ ಘಸ್ತೆ ಮಿಥುನ ಹೆಗ್ರೆ ಧರಣಿಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ