ಆ್ಯಪ್ನಗರ

ಸಮರ್ಪಕ ಬಸ್‌ ಸೌಲಭ್ಯಕ್ಕಾಗಿ ರಸ್ತೆ ತಡೆದು ಪ್ರತಿಭಟನೆ

ಚಿಕ್ಕೋಡಿ: ಸಮರ್ಪಕ ಬಸ್‌ ಸೌಲಭ್ಯ ಕಲಿಸುವಂತೆ ಒತ್ತಾಯಿಸಿ ಶನಿವಾರ ಇಲ್ಲಿನ ಮುಗಳಿ ಮತ್ತು ಕಮತೇನಟ್ಟಿ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳು ಚಿಕ್ಕೋಡಿ-ಹುಕ್ಕೇರಿ ...

Vijaya Karnataka 8 Jul 2018, 5:00 am
ಚಿಕ್ಕೋಡಿ: ಸಮರ್ಪಕ ಬಸ್‌ ಸೌಲಭ್ಯ ಕಲಿಸುವಂತೆ ಒತ್ತಾಯಿಸಿ ಶನಿವಾರ ಇಲ್ಲಿನ ಮುಗಳಿ ಮತ್ತು ಕಮತೇನಟ್ಟಿ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳು ಚಿಕ್ಕೋಡಿ-ಹುಕ್ಕೇರಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.
Vijaya Karnataka Web BEL-7CKD1


ಚಿಕ್ಕೋಡಿ, ಮಜಲಟ್ಟಿ ಮತ್ತು ಹುಕ್ಕೇರಿ ಪಟ್ಟಣಗಳ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಶನಿವಾರ ಬೆಳಗ್ಗೆ 8 ಗಂಟೆಗೆ ರಸ್ತೆ ಮಾಡಿ ಪ್ರತಿಭಟನೆ ಆರಂಭಿಸಿ ಸುಮಾರು 4 ಗಂಟೆಗಳ ಕಾಲ ರಸ್ತೆ ಬಂದ್‌ ಮಾಡಿದ್ದರು. ಇದರಿಂದ ಚಿಕ್ಕೋಡಿ ಮತ್ತು ಹುಕ್ಕೇರಿ ಕಡೆಗೆ ಹೋಗುವ ಬಸ್‌ಗಳಲ್ಲಿದ್ದ ಪ್ರಯಾಣಿಕರು ಪರದಾಡಬೇಕಾಯಿತು.

ಸರಿಯಾದ ಬಸ್‌ ಸೌಲಭ್ಯವಿಲ್ಲದಿರುವುದರಿಂದ ವಿದ್ಯಾರ್ಥಿಗಳು ಪ್ರತಿದಿನ ತೊಂದರೆ ಅನುಭವಿಸಬೇಕಾಗಿದೆ. ಚಿಕ್ಕೋಡಿಯಿಂದ ಕಮತೇನಟ್ಟಿ ಮತ್ತು ಮುಗಳಿ ಮಾರ್ಗವಾಗಿ ಸಂಕೇಶ್ವರಕ್ಕೆ ಮತ್ತು ಚಿಕ್ಕೋಡಿಯಿಂದ ಕಮತೇನಟ್ಟಿ ಮತ್ತು ಮುಗಳಿ ಮಾರ್ಗವಾಗಿ ಹುಕ್ಕೇರಿಗೆ ಪ್ರತಿದಿನ ಬೆಳಗ್ಗೆ 9 ಕ್ಕೆ ಮತ್ತು ಸಂಜೆ 4 ಗಂಟೆಗೆ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ನಂತರ ರಸ್ತೆ ಸಾರಿಗೆ ಸಂಸ್ಥೆ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಬಸ್‌ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

ಮಾಜಿ ಜಿಪಂ ಸದಸ್ಯ ಮಹೇಶ ಭಾತೆ, ಗ್ರಾಪಂ ಅಧ್ಯಕ್ಷ ವಿರುಪಾಕ್ಷಿ ಕೊಟಬಾಗಿ, ರಾಜು ಹರಗನ್ನವರ, ಸಿದಗೌಡ ಪಾಟೀಲ, ಕಲ್ಲಪ್ಪ ಬಡಿಗೇರ, ಈರಗೌಡ ಪಾಟೀಲ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ