ಆ್ಯಪ್ನಗರ

ನೆರೆ ಪರಿಹಾರಕ್ಕೆ ಒತ್ತಾಯಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ಬೆಳಗಾವಿ: ಅತಿವೃಷ್ಟಿ ಮತ್ತು ನೆರೆಹಾವಳಿ ಸಂತ್ರಸ್ತರಿಗೆ ಜೀವನ ಭದ್ರತೆಗೆ ನೀಡುವಂತೆ ಒತ್ತಾಯಿಸಿ ...

Vijaya Karnataka 23 Sep 2019, 5:00 am
ಬೆಳಗಾವಿ: ಅತಿವೃಷ್ಟಿ ಮತ್ತು ನೆರೆಹಾವಳಿ ಸಂತ್ರಸ್ತರಿಗೆ ಜೀವನ ಭದ್ರತೆಗೆ ನೀಡುವಂತೆ ಒತ್ತಾಯಿಸಿ ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌ ನಗರದ ರಾಣಿ ಚನ್ನಮ್ಮ ಪುತ್ಥಳಿ ಎದುರು ಅಡ್ಡ ಮಲಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web 22RAJU-1051215


ಭಾನುವಾರ ಬೆಂಬಲಿಗರೊಂದಿಗೆ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ಅವರು, ಅಶ್ವಾರೂಢ ಪುತ್ಥಳಿ ಎದುರು ಮಲಗಿ ಧಿಕ್ಕಾರ ಕೂಗಿ, ಧರಣಿ ನಡೆಸಿದರು. ಸಂಚಾರ ದಟ್ಟಣೆಯಾಗುತ್ತಿದ್ದಂತೆ ಪೊಲೀಸರು ವಾಟಾಳ ನಾಗರಾಜ್‌ ಮತ್ತು ಬೆಂಬಲಿಗರನ್ನು ಬಂಧಿಸಿ, ವಾಹನದಲ್ಲಿಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿಸುದ್ದಿಗಾರರ ಜತೆ ಮಾತನಾಡಿದ ಅವರು, ''ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದಾಗಿ ರಾಜ್ಯದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಆಸ್ತಿ-ಪಾಸ್ತಿ ಕಳೆದು ಕೊಂಡಿದ್ದಾರೆ. ಅವರ ಬದುಕು ಮರುನಿರ್ಮಾಣಕ್ಕೆ ಕೇಂದ್ರ, ರಾಜ್ಯ ಸರಕಾರಗಳೆರಡೂ ಕಾಳಜಿ ತೋರುತ್ತಿಲ್ಲ'' ಎಂದು ಗುಡುಗಿದರು.

ಕುರಿ ಸಮ್ಮೇಳನ ನಡೆಸುವ ಎಚ್ಚರಿಕೆ:
ಪರಿಹಾರ ಕಾರ್ಯಗಳು ಮಾತಿನಲ್ಲಿಉಳಿದಿವೆ. ವಾಸ್ತವದಲ್ಲಿನಡೆಯುತ್ತಿಲ್ಲ. ಸುವರ್ಣ ವಿಧಾನ ಸೌಧದಲ್ಲಿಚಳಿಗಾಲದ ಅಧಿವೇಶನ ನಡೆಸಿ, ಸಂತ್ರಸ್ತರ ಕಣ್ಣೀರು ತೊಡೆಯಲು ಅಗತ್ಯ ರೂಪರೇಷೆ ಸಿದ್ಧಪಡಿಸಬೇಕಾದ ಸರಕಾರ, ಅಧಿವೇಶನವನ್ನು ರದ್ದು ಪಡಿಸಿ ಬೆಂಗಳೂರಿನಲ್ಲಿಇಟ್ಟುಕೊಂಡಿದೆ. ಏನೇ ಅಡಚಣೆಗಳು ಇದ್ದರೂ ಅಧಿವೇಶನ ಬೆಳಗಾವಿಯಲ್ಲೇ ನಡೆಯಬೇಕು. ಇಲ್ಲದಿದ್ದರೆ ಇಲ್ಲಿಕುರಿಗಳ ಸಮ್ಮೇಳನ ನಡೆಸುವುದಾಗಿ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ