ಆ್ಯಪ್ನಗರ

80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಯಮಕನಮರಡಿ: ಸಂಕೇಶ್ವರ ಡಿಪೋದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ...

Vijaya Karnataka 10 Jul 2019, 5:00 am
ಯಮಕನಮರಡಿ : ಸಂಕೇಶ್ವರ ಡಿಪೋದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಡ್ಡಿ-ಹತ್ತರಗಿಗೆ ಪ್ರತಿದಿನ ಬೆಳಗ್ಗೆ 9.15 ಹಾಗೂ ಹತ್ತರಗಿ-ದಡ್ಡಿಗೆ ಪ್ರತಿದಿನ ಸಂಜೆ 4.15ಕ್ಕೆ ಬಸ್‌ ಬಿಡಬೇಕು ಎಂದು ಒತ್ತಾಯಿಸಿ ದಡ್ಡಿ ಜಿಪಂ ವ್ಯಾಪ್ತಿಗೆ ಬರುವ ಹಲವು ಗ್ರಾಮಗಳ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Vijaya Karnataka Web BEL-9YMD1


ದಡ್ಡಿ ಜಿಪಂ ವ್ಯಾಪ್ತಿಯ ದಡ್ಡಿ, ಮಾನಗಾಂವ, ಅಲದಾಳ, ದಡ್ಡಿ-ಗುಡನಹಟ್ಟಿ, ಬಿದರೆವಾಡಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿಂದ ಪ್ರತಿದಿನ ಯಮಕನಮರಡಿಯ ಶಾಲಾ ಕಾಲೇಜುಗಳಿಗೆ ಹೋಗುವ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಂಗಳವಾರ ತರಗತಿಗಳಿಗೆ ಹೋಗದೆ ಹತ್ತರಗಿ ಬಸ್‌ ನಿಲ್ದಾಣಧಿಕಾರಿಯನ್ನು ಭೇಟಿ ಮಾಡಿದರು. ಅಲ್ಲಿ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಯಮಕನಮರಡಿ ಪೊಲೀಸ್‌ ಠಾಣೆಗೆ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಅಲ್ಲಿಯೂ ಸಮಸ್ಯೆಗೆ ಸರಿಯಾದ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿದ್ಯಾರ್ಥಿಗಳು ಮಾತನಾಡಿದರು.

''ದಡ್ಡಿಯಿಂದ ಹತ್ತರಗಿಗೆ ಸಮರ್ಪಕ ಬಸ್‌ ಸೌಕರ್ಯವಿಲ್ಲದೆ ಈ ಭಾಗದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿದಿನ ಎರಡು ತರಗತಿಗಳು ತಪ್ಪಿ ಹೋಗುತ್ತಿವೆ. ಶಾಲಾ ಕಾಲೇಜುಗಳು ಆರಂಭವಾಗಿ ಒಂದು ತಿಂಗಳ ಗತಿಸಿದರೂ ವಿದ್ಯಾರ್ಥಿಗಳಿಗೆ ಪಾಸ್‌ ವಿತರಿಸಲಾಗಿಲ್ಲ. ನಮಗೆ ಸರಿಯಾದ ಬಸ್‌ ಸೌಕರ್ಯವೇ ಇಲ್ಲದ ಮೇಲೆ ಪಾಸ್‌ಗಳಾದರೂ ಏಕೆ ಬೇಕು'' ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ''ನಮ್ಮ ಸಮಸ್ಯೆಯನ್ನು ಪರಿಹರಿಸಲು ಯಾವ ಜನನಾಯಕರೂ, ಅಧಿಕಾರಿಗಳೂ ಮನಸ್ಸು ಮಾಡುತ್ತಿಲ್ಲ'' ಎಂದು ತಮ್ಮ ನೋವು ಹೊರ ಹಾಕಿದರು.

ದಡ್ಡಿ ಭಾಗದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಬಸ್‌ ಸೌಕರ್ಯದ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲಾಗುವುದು. ಜು.10ರಿಂದ ಬೆಳಗ್ಗೆ 9.15ಕ್ಕೆ ಮತ್ತು ಸಂಜೆ 4.15ಕ್ಕೆ ಬಸ್‌ ಆರಂಭಿಸಲಾಗುವುದು.
- ಗಣೇಶ ಜವಳಿ, ಸಂಕೇಶ್ವರ ಕೆಎಸ್‌ಆರ್‌ಟಿಸಿ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ