ಆ್ಯಪ್ನಗರ

ಪಾಲಿಕೆ ಎದುರು ಮಂಜುಗಡ್ಡೆ ಮೇಲೆ ಕುಳಿತು ಪ್ರತಿಭಟನೆ

ಬೆಳಗಾವಿ: ಇಲ್ಲಿನ ಬಸವನಕೊಳ್ಳದ ಜಲಶುದ್ಧೀಕರಣ ಘಟಕ ...

Vijaya Karnataka 5 Feb 2020, 5:00 am
ಬೆಳಗಾವಿ: ಇಲ್ಲಿನ ಬಸವನಕೊಳ್ಳದ ಜಲಶುದ್ಧೀಕರಣ ಘಟಕ ನಿರ್ಮಾಣದಲ್ಲಿಭ್ರಷ್ಟಾಚಾರ ನಡೆದಿದ್ದು, ಇದರಲ್ಲಿಭಾಗಿಯಾದವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮಾಜಿ ನಗರಸೇವಕ ಡಾ. ದಿನೇಶ ನಾಶಿಪುಡಿ ಪಾಲಿಕೆ ಎದುರು ಮಂಗಳವಾರ ಮಂಜುಗಡ್ಡೆ ಮೇಲೆ ಕುಳಿತು ಪ್ರತಿಭಟಿಸಿದರು.
Vijaya Karnataka Web 4RAJU-5073423
ಬೆಳಗಾವಿ ಪಾಲಿಕೆ ಎದುರು ಮಂಜುಗಡ್ಡೆ ಮೇಲೆ ಕುಳಿತು ಪ್ರತಿಭಟಿಸುತ್ತಿರುವ ಡಾ.ದಿನೇಶ ನಾಶಿಪುಡಿ.


ಯೋಜನೆಯಲ್ಲಿಆಗಿರುವ ಲೋಪದೋಷ ಮತ್ತು ಭ್ರಷ್ಟಾಚಾರದ ಸಂಗತಿಯಲ್ಲಿಪಾಲಿಕೆ ಆಯುಕ್ತರ ನೇತೃತ್ವದ ಸಮಿತಿ ಪ್ರಾಥಮಿಕ ತನಿಖೆ ನಡೆಸಿ ವರದಿ ಸಿದ್ಧಪಡಿಸಿ ಬೆಂಗಳೂರಿನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸಿಕೊಟ್ಟಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಇದು ಜನರಲ್ಲಿಸಂಶಯ ಮೂಡುವಂತೆ ಮಾಡಿದೆ ಎಂದು ಅವರು ಆರೋಪಿಸಿದರು.

ಜನರ ತೆರಿಗೆ ಹಣದಲ್ಲಿಜಲಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಆದರೆ, ಯೋಜನೆಯಂತೆ ಅಲ್ಲಿಕಾಮಗಾರಿಗಳು ನಡೆಯದೇ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಕುಡಿಯುವ ನೀರಿನಂಥ ಸೂಕ್ಷ್ಮ ಯೋಜನೆಯಲ್ಲಿಸಾಕಷ್ಟು ಲೋಪದೋಷಗಳು ಆಗಿವೆ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ. ಅವ್ಯವಹಾರ ನಡೆಸಿದವರ ವಿರುದ್ಧ ಸ್ವತಃ ಪಾಲಿಕೆ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಅವರು ಒತ್ತಾಯಿಸಿದರು.

ವಂಟಮೂರಿ ಮತ್ತು ರುಕ್ಮಿಣಿ ನಗರದಲ್ಲಿಪಾಲಿಕೆಯಿಂದ ಈ ಹಿಂದೆ ನಿರ್ಮಿಸಲಾಗಿರುವ ಕಚ್ಚಾ ಆಶ್ರಯ ಮನೆಗಳು ಈಗ ಶಿಥಿಲಗೊಂಡಿದ್ದು, ಅವುಗಳನ್ನು ಪಕ್ಕಾ ಮನೆಗಳನ್ನಾಗಿ ನಿರ್ಮಿಸಲು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ನಿರಾಕ್ಷೇಪಣಾ ಪತ್ರ ನೀಡಬೇಕು ಎಂದು ದಿನೇಶ ನಾಶಿಪುಡಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿರುಕ್ಮಿಣಿ ಮತ್ತು ವಂಟಮೂರಿ ಕಾಲನಿಯ ಜನ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ