ಆ್ಯಪ್ನಗರ

ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಬೆಳಗಾವಿ ಜಿಲ್ಲಾಧಿಕಾರಿಗೆ ಬೀದಿ ವ್ಯಾಪಾರಿಗಳ ಸಂಘಟನೆ ಕಾರ್ಯಕರ್ತರ ಮನವಿ

ಬೆಳಗಾವಿ: ಪೊಲೀಸರು ಬೀದಿ ಬದಿಯಲ್ಲಿ ವ್ಯಾಪಾರ ...

Vijaya Karnataka 22 Nov 2020, 5:00 am
ಬೆಳಗಾವಿ: ಪೊಲೀಸರು ಬೀದಿ ಬದಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ಬೀದಿ ವ್ಯಾಪಾರಿಗಳ ಸಂಘಟನೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web 21PRAMOD6_52
ಜಿಲ್ಲಾಧಿಕಾರಿ ಕಚೇರಿ ಎದುರು ಬೀದಿ ಬದಿ ವ್ಯಾಪಾರಿಗಳು ಧರಣಿ ನಡೆಸಿದರು.


ಪೊಲೀಸರು ಏಕಾಏಕಿ ಬಂದು ತರಕಾರಿಗಳನ್ನು ಎಸೆದು ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದಾರೆ. ಈಗಾಗಲೇ ಪಾಲಿಕೆಯಿಂದ ಅಧಿಕೃತ ನೋಂದಣಿ ಪಡೆದು ಬೀದಿ ಬದಿಯಲ್ಲಿವ್ಯಾಪಾರ ಆರಂಭಿಸಿದ್ದೇವೆ. ಆದರೆ, ಪಾಲಿಕೆ ಹಾಗೂ ಪೊಲೀಸ್‌ ಸಿಬ್ಬಂದಿ ಪದೇ ಪದೆ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಖಡೇಬಜಾರ್‌, ಶನಿವಾರ್‌ ಕೂಟ, ಸಮಾದೇವಿ ಗಲ್ಲಿಯ ವ್ಯಾಪಾರಿಗಳನ್ನು ಟಾರ್ಗೆಟ್‌ ಮಾಡಲಾಗಿದೆ. ಸಾವಿರಾರು ರೂ. ತರಕಾರಿಯನ್ನು ಬೀದಿಯಲ್ಲಿ ಎಸೆದ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಆಗ್ರಹಿಸಿದರು.

ಸಂಗೀತಾ ಖೋತ್‌, ಸರಸ್ವತಿ ಜಾಧವ, ಸುನಿತಾ ಕಾಂಬಳೆ, ದಯಾ ಪ್ರಕಾಶ ಕಣಬರಕರ್‌, ಜೋತಿಬಾ ಪಾಟೀಲ, ಬಾಳು ಪಾಟೀಲ, ಸಚಿನ್‌ ಕಿಲ್ಲೇಕರ್‌, ಗೋವಿಂದ ಲಾಳಗೆ, ಲಕ್ಷತ್ರ್ಮಣ ಸಾಂಬ್ರೆಕರ್‌, ಯಲಪ್ಪಾ ಸನದಿ, ಅಜಿತ ಸನದಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ