ಆ್ಯಪ್ನಗರ

ಸಮರ್ಪಕ ಬಸ್‌ ಸಂಚಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಯರಗಟ್ಟಿ: ಸರಿಯಾದ ಸಮಯಕ್ಕೆ ಬಸ್‌ ಸಂಚಾರವಿಲ್ಲದೆ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಕುರಬಗಟ್ಟಿ, ತಾವಲಗೇರಿ ಹಾಗೂ ...

Vijaya Karnataka 5 Jul 2019, 5:00 am
ಯರಗಟ್ಟಿ: ಸರಿಯಾದ ಸಮಯಕ್ಕೆ ಬಸ್‌ ಸಂಚಾರವಿಲ್ಲದೆ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಕುರಬಗಟ್ಟಿ, ತಾವಲಗೇರಿ ಹಾಗೂ ಕೊಡ್ಲಿವಾಡ ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು.
Vijaya Karnataka Web BLG-0407-2-52-4YGT1


ಕೊಡ್ಲಿವಾಡ, ತಾವಲಗೇರಿ ಹಾಗೂ ಕುರಬಗಟ್ಟಿ ಗ್ರಾಮಗಳಿಂದ ಸತ್ತಿಗೇರಿಗೆ ನೂರಾರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಶಿಕ್ಷ ಣಕ್ಕಾಗಿ ಹೋಗುತ್ತಿದ್ದು ಸರಿಯಾದ ಸಮಯಕ್ಕೆ ಬಸ್‌ ಬರದೆ ಪ್ರತಿ ದಿನ ಎಂಟರಿಂದ ಹತ್ತು ಕಿ.ಮೀ. ದೂರವನ್ನು ನಡೆದುಕೊಂಡೇ ಹೋಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್‌ ಅನ್ನು ಯರಗಟ್ಟಿ ಬಸ್‌ ನಿಲ್ದಾಣಕ್ಕೆ ತೆಗೆದುಕೊಂಡು ಬಂದಾಗ ಗ್ರಾಮಸ್ಥರು ಸಹ ಬಸ್‌ ನಿಲ್ದಾಣಕ್ಕೆ ಬಂದು ಪ್ರತಿಭಟಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿ ಆಗಮಿಸಿ ಸೋಮವಾರದಿಂದ ಸರಿಯಾದ ಸಮಯಕ್ಕೆ ಬಸ್‌ ಬಿಡುವುದಾಗಿ ಆಶ್ವಾಸನೆ ನೀಡಿದಾಗ ಪ್ರತಿಭಟನೆ ಹಿಂದೆ ಪಡೆದರು. ಕುರಬಗಟ್ಟಿ, ತಾವಲಗೇರಿ, ಕೊಡ್ಲಿವಾಡ ಹಾಗೂ ಸತ್ತಿಗೇರಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ