ಆ್ಯಪ್ನಗರ

ಬೆಳೆ ವಿಮೆ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ಫಸಲ್‌ ಬಿಮಾ ಬೆಳೆ ವಿಮೆ ...

Vijaya Karnataka 31 Oct 2019, 5:00 am
ಬೆಳಗಾವಿ: ಫಸಲ್‌ ಬಿಮಾ ಬೆಳೆ ವಿಮೆ ಯೋಜನೆಯಡಿ ಬೆಳೆ ಕಟಾವು ಪ್ರಯೋಗ ಮಾಡಿದ ಅಧಿಕಾರಿಗಳು ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಬುಧವಾರ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ರವಾನಿಸಿದರು.
Vijaya Karnataka Web 30 LBS 1_53


2018-19ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿಮಳೆ ಕೊರತೆಯಿಂದ ಶೇ.80 ರಷ್ಟು ಜೋಳದ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ಸರಕಾರ ರಾಮದುರ್ಗ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿತ್ತು. ಆದರೆ, ಗ್ರಾಪಂ ಸಿಬ್ಬಂದಿ ಮತ್ತು ಅಂಕಿ ಅಂಶ ಇಲಾಖೆ ಅಧಿಕಾರಿಗಳು ಹಣದ ಆಸೆಗಾಗಿ ಪ್ಯೂಚರ್‌ ಜನರಲ್‌ ಇಂಡಿಯಾ ಇನ್ಸುರೆನ್ಸ್‌ ಕಂಪನಿಯ ಜತೆಗೆ ಶಾಮೀಲಾಗಿ ಬೆಳೆ ಕಟಾವು ಪ್ರಯೋಗದಲ್ಲಿಮೋಸ ಮಾಡಿದ್ದಾರೆ. ಇದರಿಂದ ಲಕ್ಷಾಂತರ ರೈತರಿಗೆ ಬರಬೇಕಾದ ಬೆಳೆ ವಿಮೆ ಹಣ ತಪ್ಪಿಸಿದ್ದಾರೆ ಎಂದು ರೈತರು ದೂರಿದರು.

ಮೈಲಾರಪ್ಪ ಚಿಂಚಲಕಟ್ಟಿ, ನಿಂಗರಪ್ಪ ಹರಗುಟಗಿ, ಬಸಪ್ಪ ಸಂಕದಾಳ, ಉಮೇಶ ಹಕಾಟಿ, ಶೇಖರಗೌಡ ಚಿಕ್ಕನಗೌಡ್ರ, ಹನುಮಂತ ದಾಸರ, ವೆಂಕಪ್ಪ ಕಿತ್ತೂರ, ಲಕ್ಷ್ಮಣ ಹಡಪದ, ಹನುಮಂತ ಅಂಗಡಿ, ಶೇಖಪ್ಪ ಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ:
ಗ್ರಾಪಂ ಸಿಬ್ಬಂದಿ ಮತ್ತು ಅಂಕಿ ಅಂಶ ಇಲಾಖೆ ಅಧಿಕಾರಿಗಳು ಮುದೇನೂರು ಗ್ರಾಮಕ್ಕೆ ಹೋಗಿ ಬೆಳೆ ಕಟಾವು ಪ್ರಯೋಗ ಮಾಡಿಲ್ಲ. ಬದಲಾಗಿ ಇಳುವರಿ ಹೆಚ್ಚುವರಿ ಬಂದಿದೆ ಎಂದು ತಪ್ಪು ಮಾಹಿತಿ ತೋರಿಸಿ ರೈತರಿಗೆ ಬೆಳೆ ವಿಮೆ ಹಣ ಸಿಗದಂತೆ ಮಾಡಿದ್ದಾರೆ. ವಿಮಾ ಕಂಪನಿಯ ರಕ್ಷಣೆಗಾಗಿ ಸರಕಾರಿ ಅಧಿಕಾರಿಗಳು ರೈತರಿಗೆ ವಂಚನೆ ಮಾಡಿದ್ದು, ತಪ್ಪಿತಸ್ಥ ಅಧಿಕಾರಿಗಳು ಹಾಗೂ ವಿಮಾ ಕಂಪನಿಯ ವಿರುದ್ಧ ಕ್ರಮ ಜರುಗಿಸಿ ರೈತರಿಗೆ ವಿಮೆ ಹಣ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ