ಆ್ಯಪ್ನಗರ

ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ

ತೆಲಸಂಗ: ಗ್ರಾಮದಿಂದ ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ...

Vijaya Karnataka 13 Mar 2020, 5:00 am
ತೆಲಸಂಗ: ಗ್ರಾಮದಿಂದ ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣ- ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿ ಗ್ರಾಮದ ಯುವಕರು ಗುರುವಾರ ರಸ್ತೆ ತಡೆದು ಪ್ರತಿಭಟಿಸಿದರು.
Vijaya Karnataka Web 12TELSANG2_53
ತೆಲಸಂಗ - ವಿಜಯಪುರ ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟಿಸಲಾಯಿತು.


4 ಕಿಮೀ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿ ಮಾಡುವಂತೆ 5 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಈ ಮಾರ್ಗದಲ್ಲಿನಿತ್ಯ ಸಾರಿಗೆ ಬಸ್‌ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಲವು ಕಡೆ ರಸ್ತೆ ಕುಸಿದಿದೆ. ಇನ್ನು ಕೆಲವು ಕಡೆ ಗುಂಡಿಗಳು ಬಿದ್ದಿವೆ. ಇದರಿಂದ ಈ ರಸ್ತೆಯಲ್ಲಿಪ್ರಯಾಣಿಸುವುದು ಕಷ್ಟವಾಗುತ್ತಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಥಣಿ - ವಿಜಯಪುರ ಮಾರ್ಗದ ಈ ರಸ್ತೆ ತೆಲಸಂಗ ಹೋಬಳಿಯ ಗ್ರಾಮಗಳ ಜನತೆಯ ಪ್ರಯಾಣಕ್ಕೆ ಇರುವ ಪ್ರಮುಖ ರಸ್ತೆ. ಅಲ್ಲದೇ ಹತ್ತಾರು ಹಳ್ಳಿಯ ಜನರು ತೆಲಸಂಗ ಮೂಲಕ ಇದೇ ರಸ್ತೆಯನ್ನು ಪ್ರಯಾಣಕ್ಕೆ ಬಳಸುತ್ತಾರೆ. ಪ್ರಯಾಣದ ವೇಳೆ ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿದೆ. ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಗ್ರಾಮದ ಮುಖಂಡರಾದ ವಿಲಾಸ ಮೋರೆ, ಅಣ್ಣಪ್ಪ ಶಿರಹಟ್ಟಿ, ಶ್ರೀಕಾಂತ ದಶವಂತ, ರಾಜು ಹೊನಕಾಂಬಳೆ, ಚಾಂದಸಾಬ್‌ ಅತ್ತಾರ ಇತರರು ಎಚ್ಚರಿಸಿದರು.

ವಾಹನ ಮಾಲೀಕರು ಸರಕಾರಕ್ಕೆ ತೆರಿಗೆ ಪಾವತಿಸುತ್ತಾರೆ. ಸಂಚರಿಸುವ ರಸ್ತೆಯನ್ನು ದುರಸ್ತಿ ಮಾಡುವಂತೆ ಹತ್ತಾರು ವರ್ಷ ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲ. ತಕ್ಷಣ ರಸ್ತೆ ಡಾಂಬರೀಕರಣ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ.
- ರಾಜಕುಮಾರ ಹೊನಕಾಂಬಳೆ, ತೆಲಸಂಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ