ಆ್ಯಪ್ನಗರ

ನೀರಿಗಾಗಿ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ

ಉಗಾರ: ಕೃಷ್ಣಾ ನದಿಯಲ್ಲಿ ನೀರು ಹರಿಸುವ ಪ್ರಯತ್ನ ಈ ಮೊದಲೇ ಆಗಬೇಕಾಗಿತ್ತು ನದಿ ಸಂಪೂರ್ಣವಾಗಿ ಬತ್ತಿಹೋಗಿದ್ದು, ಜನರ ಹನಿ ನೀರಿಗಾಗಿ ಹೋರಾಡುತ್ತಿದ್ದಾರೆ...

Vijaya Karnataka 5 May 2019, 5:00 am
ಉಗಾರ : ಕೃಷ್ಣಾ ನದಿಯಲ್ಲಿ ನೀರು ಹರಿಸುವ ಪ್ರಯತ್ನ ಈ ಮೊದಲೇ ಆಗಬೇಕಾಗಿತ್ತು. ನದಿ ಸಂಪೂರ್ಣವಾಗಿ ಬತ್ತಿಹೋಗಿದ್ದು, ಜನರ ಹನಿ ನೀರಿಗಾಗಿ ಹೋರಾಡುತ್ತಿದ್ದಾರೆ. ರಾಜಕೀಯ ಪಕ್ಷ ಗಳು ಗಂಡ-ಹೆಂಡತಿಯಂತೆ ಮಹಾರಾಷ್ಟ್ರ ಸರಕಾರಕ್ಕೆ ಹೋಗಿ ನೀರಿಗಾಗಿ ಮನವಿ ಅರ್ಪಿಸುತ್ತಿವೆ. ಇದರಲ್ಲಿ ಕೂಸಾಗಿರುವ ಜನತೆ, ಪ್ರಾಣ ಕಳೆದುಕೊಳ್ಳುತ್ತಿದೆ ಎಂದು ಇಲ್ಲಿನ ಹಿರಿಯ ರೈತ ಮುಖಂಡ ವೀರಭದ್ರ ಕಟಿಗೇರಿ ಟೀಕಿಸಿದರು.
Vijaya Karnataka Web BEL-04 UGAR 1 NEWS PHOTO


ಅವರು ಶನಿವಾರ ಉಗಾರ-ಜಮಖಂಡಿ ರಾಜ್ಯ ಹೆದ್ದಾರಿಯ ಬಸವೇಶ್ವರ ವೃತ್ತದಲ್ಲಿ ಮಹಿಳೆಯರೂ ಸೇರಿದಂತೆ ನೂರಾರು ಜನ ರೈತರು ಖಾಲಿ ಬಿಂದಿಗೆಗಳನ್ನು ಹಿಡಿದು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳೆಯರು ತಹಸೀಲ್ದಾರ್‌ ಮೇಘರಾಜ ನಾಯಕ ಅವರಲ್ಲಿ ನೀರಿಗಾಗಿ ಮನವಿ ಮಾಡಿಕೊಂಡು ನದಿಗೆ ನೀರು ಹರಿಸಲು ಆಗುತ್ತಿರುವ ವಿಳಂಬದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತಿದೆ ಎಂದು ಆರೋಪಿಸಿದರು.

ಉಗಾರದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ನೀರು ಪೂರೈಸುವ ಪೈಪ್‌ಲೈನ್‌ ಕಿತ್ತುಹಾಕಿ, ಒಂದು ತಿಂಗಳು ಗತಿಸಿದೆ. ಈವರೆಗೆ ಕಾಮಗಾರಿ ಕೈಗೊಂಡಿಲ್ಲ ಎಂದು ಆರೋಪಿಸಿದರಲ್ಲದೆ ಟ್ಯಾಂಕರ್‌ ಮುಖಾಂತರ ನೀರು ಪೂರೈಸಲು ಆಗ್ರಹಿಸಿದರು.

ಪುರಸಭೆ ಸದಸ್ಯರಾದ ಬಾಳಕೃಷ್ಣ ಪಾಟೀಲ, ವಿಜಯ ಆಸೂದೆ, ಅವಿನಾಶ ಮೋರೆ, ವೀರಭದ್ರ ಕಟಿಗೇರಿ, ಚಂದ್ರಕಾಂತ ಸೂರ್ಯವಂಶಿ, ಎಸ್‌.ಎಂ.ಮುಲ್ಲಾ, ಕರವೇ ಕಾರ್ಯಕರ್ತ ರಾಜೇಶ ದಾನೋಳಿ, ಮಹಾದೇವ ಕಟಿಗೇರಿ, ವಿಜಯ ಮಾಳಿ, ವಿಶಾಲ ಚವಾಣ, ಮಹೇಂದ್ರ ಗಾಡಿವಡ್ಡರ, ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ