ಆ್ಯಪ್ನಗರ

ಅಯೋಧ್ಯೆಯನ್ನು ಬೌದ್ಧ ಸ್ಮಾರಕವೆಂದು ಘೋಷಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

ಅಯೋಧ್ಯೆಯನ್ನು ಬೌದ್ಧ ಸ್ಮಾರಕವೆಂದು ಘೋಷಿಸುವಂತೆ ಆಗ್ರಹಿಸಿ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದಿದೆ. ಪುರಾತತ್ವ ಇಲಾಖೆ ಪ್ರಕಾರ ಅಯೋಧ್ಯೆ ಬೌದ್ಧರ ನೆಲೆಯಾಗಿದೆ ಎನ್ನಲಾಗಿದೆ.

Vijaya Karnataka Web 2 Jul 2020, 5:12 pm
ಬೆಳಗಾವಿ: ಅಯೋಧ್ಯೆಯನ್ನು ಬೌದ್ಧ ಸ್ಮಾರಕವೆಂದು ಘೋಷಿಸುವಂತೆ ಆಗ್ರಹಿಸಿ ಸೋಮವಾರ ಜೈ ಭೀಮ ಬಹುಜನ ಯುವ ಸಂಘದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
Vijaya Karnataka Web Ayodhya
ಸಂಗ್ರಹ ಚಿತ್ರ


ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಆ ಸ್ಥಳದಲ್ಲಿ ಬೌದ್ಧರ ಅವಶೇಷಗಳು, ಕಲಾಕೃತಿಗಳು ದೊರೆತಿವೆ. ಪುರಾತತ್ವ ಇಲಾಖೆ ಪ್ರಕಾರ ಅಯೋಧ್ಯೆ ಬೌದ್ಧರ ನೆಲೆಯಾಗಿದೆ. ಬೌದ್ಧರ ಕಾಲದಲ್ಲಿಅಯೋಧ್ಯೆ ಸಾಕೇತ ನಗರವೆಂದು ಪ್ರಖ್ಯಾತಿ ಪಡೆದಿತ್ತು. ಗೌತಮ ಬುದ್ಧರು ಅನೇಕ ವರ್ಷಗಳ ಕಾಲ ಅಯೋಧ್ಯೆಯಲ್ಲಿ ನೆಲೆಸಿದ್ದರು. ಈ ಕುರಿತು ಉಲ್ಲೇಖಗಳು ಕೂಡ ಇವೆ. ಆದರೆ, ಕೆಲವರು ಅಯೋಧ್ಯೆಯಲ್ಲಿನ ವಿಗ್ರಹಗಳನ್ನು ಶಿವಲಿಂಗ ಎಂದು ತಪ್ಪಾಗಿ ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಅಯೋಧ್ಯೆಯಲ್ಲಿ ದೊರೆತಿರುವ ಅವಶೇಷಗಳು, ವಿಗ್ರಹಗಳ ಕುರಿತು ಕೇಂದ್ರ ಸರಕಾರ ಪರಿಶೀಲನೆ ನಡೆಸಬೇಕು. ಅಯೋಧ್ಯೆಯನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿಯಲ್ಲಪ್ಪ ಕಾಂಬಳೆ, ಕೃಷ್ಣಾ ಪಿ., ಚೇತನ ಕೋಲಕಾರ, ಮಲ್ಲೇಶ ಕಾಂಬಳೆ, ಶಂಕರ ಕಾಂಬಳೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ