ಆ್ಯಪ್ನಗರ

ಖಾಲಿ ಕೊಡ ಪ್ರದರ್ಶಿಸಿ ತೆಲಸಂಗ ಗ್ರಾಮಸ್ಥರ ಪ್ರತಿಭಟನೆ

ತೆಲಸಂಗ: ಗ್ರಾಮದಲ್ಲಿ ಕುಡಿಯುವ ನೀರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಪುನರಾರಂಭಕ್ಕೆ ಅಧಿಕಾರಿಗಳು ...

Vijaya Karnataka 28 May 2019, 5:00 am
ತೆಲಸಂಗ : ಗ್ರಾಮದಲ್ಲಿ ಕುಡಿಯುವ ನೀರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಪುನರಾರಂಭಕ್ಕೆ ಅಧಿಕಾರಿಗಳು ಸ್ಪಂದಿಸದಿರುವುದನ್ನು ವಿರೋಧಿಸಿ ಗ್ರಾಮಸ್ಥರು ಖಾಲಿ ಕೊಡ ಪ್ರದರ್ಶಿಸಿ ಸೋಮವಾರ ಪ್ರತಿಭಟಿಸಿದರು.
Vijaya Karnataka Web BEL-27TELSANG3


ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ ಮಾತನಾಡಿ, ತಿಂಗಳಿಂದ ಬೋರ್ವೆಲ್‌ ಕೊರೆಸುವ ಭರವಸೆ ನೀಡುತ್ತಿದ್ದಾರೆ. ನೀರೊದಗಿಸುವ ಕೆಲಸಗಳ ಬಗ್ಗೆ ಜಿಲ್ಲೆ ಅಥವಾ ತಾಲೂಕು ಮಟ್ಟದ ಯಾವೊಬ್ಬ ಅಧಿಕಾರಿಯೂ ಸ್ಪಂದಿಸುತ್ತಿಲ್ಲ. ಬರ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ಸ್ಥರದಿಂದ ಸಿದ್ಧವಿದೆ ಎಂಬ ಹೇಳಿಕೆ ಪತ್ರಿಕೆಗಳಿಗೆ ಮಾತ್ರ ಸೀಮಿತವಾದಂತಾಗಿದೆ ಎಂದು ಆರೋಪಿಸಿದರು.

ತಕ್ಷ ಣವೇ ಶುದ್ಧ ಕುಡಿಯುವ ನೀರಿನ ಘಟಕಗಳ ಬಳಿ ಬೋರ್ವೆಲ್‌ ಕೊರೆಸಿ ನೀರೊದಗಿಸುವ ಕೆಲಸ ಮಾಡಬೇಕು. ಒಂದು ವೇಳೆ ಇದು ಹೀಗೆಯೇ ಮುಂದುವರಿದರೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಹಂಜಿಗೆಪ್ಪ ಶೇಗಾರ, ಲಕ್ಷ ್ಮಣ ಶೆಲ್ಲೆಪ್ಪಗೋಳ, ಪರಸಪ್ಪ ಸವದಿ, ನಿಂಗಪ್ಪ ಶೆಲ್ಲೆಪ್ಪಗೋಳ, ಮುರಗೆಪ್ಪ ಹಿರೇಕುರಬರ್‌, ಸಾಬಣ್ಣ ಹಿರೇಕುರಬರ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ