ಆ್ಯಪ್ನಗರ

ಕಾರ್ಖಾನೆಗಳು ದರ ಘೋಷಿಸದಿದ್ದರೆ ನಾಳೆ ಕಬ್ಬು ಸಾಗಿಸುವ ವಾಹನ ತಡೆದು ಪ್ರತಿಭಟನೆ

ಬೋರಗಾಂವ: ಜೈಸಿಂಗಪುರದ ಕಬ್ಬು ಪರಿಷತ್ತಿನಲ್ಲಿ ಸಂಸದ ರಾಜು ಶೆಟ್ಟಿ ಅವರ ಆಗ್ರಹದಂತೆ ಚಿಕ್ಕೋಡಿ ತಾಲೂಕಿನ ಸಕ್ಕರೆ ಕಾರ್ಖಾನೆಗಳು 9...

Vijaya Karnataka 5 Nov 2018, 5:00 am
ಬೋರಗಾಂವ : ಜೈಸಿಂಗಪುರದ ಕಬ್ಬು ಪರಿಷತ್ತಿನಲ್ಲಿ ಸಂಸದ ರಾಜು ಶೆಟ್ಟಿ ಅವರ ಆಗ್ರಹದಂತೆ ಚಿಕ್ಕೋಡಿ ತಾಲೂಕಿನ ಸಕ್ಕರೆ ಕಾರ್ಖಾನೆಗಳು 9.5 ಇಳುವರಿಯ ಪ್ರತಿ ಟನ್‌ ಕಬ್ಬಿಗೆ 2950 ರೂ. ದನ ಘೋಷಿಸಬೇಕು. ಇಲ್ಲವಾದಲ್ಲಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ವಾಹನಗಳನ್ನು ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ನೀಡಲಾಗುವುದಿಲ್ಲ ಸ್ವಾಭಿಮಾಜಿ ರೈತ ಸಂಘಟನೆಯ ತಾಲೂಕು ಕಾರ್ಯಾಧ್ಯಕ್ಷ ಕಿರಣ ಮಾನಗಾವೆ ಎಚ್ಚರಿಸಿದ್ದಾರೆ.
Vijaya Karnataka Web BEL-4ICH4


ಅವರು ಬೇಡಕಿಹಾಳದಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿ ರೈತ ಸಂಘಟನೆಯ ಸಭೆಯಲ್ಲಿ ಮಾತನಾಡಿದರು.

ಪ್ರಕಾಶ ತಾರದಾಳೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ತಾಲೂಕು ಕೋರ್‌ ಕಮಿಟಿ ಸದಸ್ಯ ರಮೇಶ ಪಾಟೀಲ, ಸುಕುಮಾರ ಉಗಾರೆ, ಸುಭಾಷ ಚೌಗಲೆ ಮಾತನಾಡಿ, ಸನ್‌ 2017-18ರಲ್ಲಿ ಕಬ್ಬು ಪೂರೈಸಿದ ರೈತರಿಗೆ ನೀಡಬೇಕಾದ ಬಿಲ್‌ನಲ್ಲಿ ಗಡಿಭಾಗದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ 217ರೂ., ಶಿವಶಕ್ತಿ ಹಾಗೂ ದೂಧಗಂಗಾ ಸಕ್ಕರೆ ಕಾರ್ಖಾನೆ 400ರೂ., ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ 651ರೂ. ಬಾಕಿ ಇರಿಸಿಕೊಂಡಿವೆ. ಅಷ್ಟೇ ಅಲ್ಲದೆ ಪ್ರಸಕ್ತ ಹಂಗಾಮಿನ ಮೊದಲ ಕಂತಿನ ದರ ಘೋಷಿಸದೆ ಕಬ್ಬು ನುರಿಸಲು ಪ್ರಾರಂಭಿಸಿವೆ. ಇನ್ನೆರಡು ದಿನಗಳಲ್ಲಿ ದರ ಘೋಷಿಸದಿದ್ದರೆ ಕಾರ್ಖಾನೆಗಳ ಕಬ್ಬು ಕಟಾವು ನಿಲ್ಲಿಸಿ ನ.6ರಂದು ಭೋಜಕ್ರಾಸ್‌ ಬಳಿ ಕಬ್ಬು ಸಾಗಿಸುವ ವಾಹನಗಳನ್ನು ತಡೆದು ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು. ಈ ಬಗ್ಗೆ ಪೊಲೀಸ್‌ ಠಾಣೆಯಿಂದ ಅಧಿಕೃತ ಅನುಮತಿ ಪಡೆದಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಕುಬೇರ ಅಜ್ಜನ್ನವರ, ಸುಭಾಷ ಚೌಗಲೆ, ಜಿತೇಂದ್ರ ಟಾಕಳೆ, ಭರತ ಅಕಿವಾಟೆ, ಸೋನು ಪಾಟೀಲ, ಪ್ರದೀಪ ಪಳಗೆ, ಸುಶಾಂತ ಪಾಟೀಲ, ಸಮ್ಮೇದ ಉತ್ತೂರೆ ಮತ್ತಿತರರು ಉಪಸ್ಥಿತರಿದ್ದರು. ಅನೀಲ ಗಡೆಪ್ಪಗೋಳ ಸ್ವಾಗತಿಸಿದರು. ವಿಕಾಸ ಸಮಗೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ