ಆ್ಯಪ್ನಗರ

ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳಿಂದ ರೈಲು ತಡೆದು ಪ್ರತಿಭಟನೆ

ಎಕ್ಸ್‌ಪ್ರೆಸ್‌ ರೈಲು ವಿಳಂಬವಾಗಿ ಸಂಚರಿಸಿದ್ದರಿಂದ ನೇಮಕಾತಿ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳು ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ.

Vijaya Karnataka 21 Mar 2019, 5:00 am
ಬೆಳಗಾವಿ: ಎಕ್ಸ್‌ಪ್ರೆಸ್‌ ರೈಲು ವಿಳಂಬವಾಗಿ ಸಂಚರಿಸಿದ್ದರಿಂದ ನೇಮಕಾತಿ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳು ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ.
Vijaya Karnataka Web BLG-2003-2-52-20RAILU


ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕರೆಯಲಾಗಿದ್ದ ಮೀಟರ್‌ ರೀಡರ್‌ ಹುದ್ದೆ ನೇಮಕಾತಿಗೆ ಬುಧವಾರ ಬೆಂಗಳೂರಿನಲ್ಲಿ ಲಿಖಿತ ಪರೀಕ್ಷೆ ಇತ್ತು. ಈ ಪರೀಕ್ಷೆಗೆ ಹಾಜರಾಗಲು ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಬೆಂಗಳೂರಿಗೆ ತೆರಳಲು ಮಂಗಳವಾರ ಸಂಜೆ ಚನ್ನಮ್ಮ ಎರ್ಸ್‌ಪ್ರೆಸ್‌ ರೈಲು ಏರಿದ್ದರು. ಬುಧವಾರ ಬೆಳಗ್ಗೆ 10.30 ಗಂಟೆಗೆ ಪರೀಕ್ಷೆಗೆ ಹಾಜರಾಗಬೇಕಿತ್ತು.ಆದರೆ, 11 ಗಂಟೆಯಾದರೂ ರೈಲು ಬೆಂಗಳೂರು ತಲುಪಿರಲಿಲ್ಲ. ತುಮಕೂರು ಬಳಿಯೇ ಇತ್ತು. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ತುಮಕೂರು ಬಳಿ ರೈಲು ತಡೆದು ಪ್ರತಿಭಟನೆ ನಡೆಸಿದರು.

ಮಂಗಳವಾರ ಸಂಜೆ 4.45ಕ್ಕೆ ರಾಯಬಾಗ ನಿಲ್ದಾಣಕ್ಕೆ ಬರಬೇಕಿದ್ದ ಕೊಲ್ಲಾಪುರ-ಬೆಂಗಳೂರು ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಎರಡೂವರೆ ಗಂಟೆ ತಡವಾಗಿ ಸಂಜೆ 7.30ಕ್ಕೆ ನಿಲ್ದಾಣಕ್ಕೆ ಬಂದಿತ್ತು. ಇದೇ ರೀತಿ ಮುಂದಿನ ನಿಲ್ದಾಣಗಳಿಗೂ ತಡವಾಗಿ ತಲುಪಿತ್ತು. ಆದರೂ, ನಿಗದಿತಾವಧಿಗೆ ಬೆಂಗಳೂರು ತಲುಪಬಹುದು ಎಂಬ ಭರವಸೆಯೊಂದಿಗೆ ಅಭ್ಯರ್ಥಿಗಳು ರೈಲು ಏರಿದ್ದರು.

''ಬೆಳಗಾವಿ ಜಿಲ್ಲೆಯ 150ಕ್ಕೂ ಹೆಚ್ಚು ಅಭ್ಯರ್ಥಿಗಳು ರೈಲಿನಲ್ಲಿದ್ದರು. ರೈಲ್ವೆ ಇಲಾಖೆ ವಿಳಂಬ ನೀತಿಯಿಂದ ಉದ್ಯೋಗ ಕಳೆದುಕೊಂಡಿರುವ ಅಭ್ಯರ್ಥಿಗಳಿಗಾಗಿ ಮರುಪರೀಕ್ಷೆ ನಡೆಸುವಂತೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೇಂದ್ರ ಕಚೇರಿಗೆ ಮನವಿ ಸಲ್ಲಿಸುತ್ತೇನೆ'' ಎಂದು ರಾಯಬಾಗದಿಂದ ರೈಲು ಏರಿ ಪರೀಕ್ಷೆ ತಪ್ಪಿಸಿಕೊಂಡಿರುವ ಸಿದ್ದಪ್ಪ ಹೊಸೆಟ್ಟಿ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ