ಆ್ಯಪ್ನಗರ

ಮಹಿಳೆಯ ಅತ್ಯಾಚಾರ, ಕೊಲೆ ಸಾಬೀತು

ವಿವಾಹ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಮಹಿಳೆಯನ್ನು ಕೊಲೆಗೈದ ಅಪರಾಧಿಗೆ ಬುಧವಾರ ಇಲ್ಲಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

Vijaya Karnataka 20 Jun 2019, 5:00 am
ಬೆಳಗಾವಿ: ವಿವಾಹ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಮಹಿಳೆಯನ್ನು ಕೊಲೆಗೈದ ಅಪರಾಧಿಗೆ ಬುಧವಾರ ಇಲ್ಲಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಮಾಣ ಕಾಯ್ದಿರಿಸಿ ತೀರ್ಪು ಪ್ರಕಟಿಸಿದೆ.
Vijaya Karnataka Web prove the rape and murder of a woman
ಮಹಿಳೆಯ ಅತ್ಯಾಚಾರ, ಕೊಲೆ ಸಾಬೀತು


ಗದಗ ಜಿಲ್ಲೆಯ ನರಗುಂದ ತಾಲೂಕಿನ ಸಂಕದಾಳದ ಗ್ರಾಮದ ಹುಸೇನಸಾಬ ಫಕೀರಸಾಬ ನದಾಫ್‌(23) ಶಿಕ್ಷೆಗೆ ಗುರಿಯಾದ ಅಪರಾಧಿ. ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ವಿವಾಹಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದ ಅಪರಾಧಿ ಹುಸೇನಸಾಬ್‌ 2015ರ ಆ.18 ರಂದು ಮಹಿಳೆ ತೊಟ್ಟಿದ್ದ ಬಟ್ಟೆಯಿಂದಲೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ಪ್ರಕರಣದ ಹಿನ್ನೆಲೆ: ಚಿಕ್ಕನರಗುಂದ ಗ್ರಾಮದ ವಿವಾಹಿತೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಹುಸೇನಸಾಬ್‌ 2015ರ ಆ.17 ರಂದು ರಾತ್ರಿ 9 ಗಂಟೆ ಸುಮಾರಿಗೆ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮಕ್ಕೆ ಕರೆತಂದು ಅತ್ಯಾಚಾರ ನಡೆಸಿದ್ದ. ಮಾತು ಕೊಟ್ಟಂತೆ ಮದುವೆಯಾಗು. ಇಲ್ಲದಿದ್ದರೆ ಘಟನೆ ಕುರಿತು ಸಹೋದರರಿಗೆ ಹೇಳಿ ಕೊಲೆ ಮಾಡಿಸುವುದಾಗಿ ಮಹಿಳೆ ಬೆದರಿಕೆ ಹಾಕಿದಾಗ ಆಕ್ರೋಶಗೊಂಡ ಹುಸೇನಸಾಬ್‌ ಆ.18ರಂದು ಸಂಜೆ 5 ಗಂಟೆ ಸಮಯದಲ್ಲಿ ಮಹಿಳೆ ತೊಟ್ಟಿದ್ದ ಬಟ್ಟೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ನಂತರ ಕೊಲೆ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮಹಿಳೆ ಶವವನ್ನು ಜಮೀನಿನ ಬದುವಿನಲ್ಲಿ ಹಾಕಿ, ಮೈಮೇಲಿದ್ದ ಬಟ್ಟೆ ಮತ್ತು ಬಂಗಾದ ಆಭರಣ ಕದ್ದು ಪರಾರಿಯಾಗಿದ್ದ. ಕೊಲೆಯಾಗಿ ಬಿದ್ದಿರುವ ಮಹಿಳೆ ಶವ ಕಂಡ ಬಟಕುರ್ಕಿ ಗ್ರಾಮಸ್ಥರು ರಾಮದುರ್ಗ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಮಹಿಳೆ ಕುಟುಂಬದ ಸದಸ್ಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಹುಸೇನಸಾಬ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದ. ಈ ಕುರಿತು ವಿಚಾರಣೆ ನಡೆಸಿದ ಅಂದಿನ ತನಿಖಾಧಿಕಾರಿ ಸೋಮಲಿಂಗ ಕಿರೇದಳ್ಳಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿ.ಬಿ. ಸೂರ್ಯವಂಶಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಮಾಣ ಗುರುವಾರಕ್ಕೆ ಕಾಯ್ದಿರಿಸಿ ಬುಧವಾರ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ಕಿರಣ್‌ ಪಾಟೀಲ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ