ಆ್ಯಪ್ನಗರ

ಹಿರಿಯ ನಾಗರಿಕರಿಗೆ ಸೌಲಭ್ಯ ಸಿಗಲಿ: ಬೆಂಡಿಗೇರಿ

ಬೆಳಗಾವಿ: 'ರಾಜ್ಯದ ಹಿರಿಯ ನಾಗರಿಕರಿಗೆ ಎಲ್ಲ ಸವಲತ್ತುಗಳು ನೇರವಾಗಿ ದೊರೆಯಬೇಕು' ಎಂದು ಹಿರಿಯ ನಾಗರಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿವೈ...

Vijaya Karnataka 9 Dec 2018, 5:00 am
ಬೆಳಗಾವಿ : 'ರಾಜ್ಯದ ಹಿರಿಯ ನಾಗರಿಕರಿಗೆ ಎಲ್ಲ ಸವಲತ್ತುಗಳು ನೇರವಾಗಿ ದೊರೆಯಬೇಕು' ಎಂದು ಹಿರಿಯ ನಾಗರಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ.ವೈ. ಬೆಂಡಿಗೇರಿ ಆಗ್ರಹಿಸಿದರು.
Vijaya Karnataka Web BLG-0812-2-52-8PRAMOD1


ನಗರದ ಬಸವನ ಕುಡಚಿಯ ದೇವರಾಜ ಅರಸ ಬಡಾವಣೆಯ ಶಿವಬಸವ ಶಿವಾಲಯ ಆವರಣದಲ್ಲಿ ನಿವೃತ್ತ ಎಂಜಿನಿಯರ್‌ ಡಿ.ಎಸ್‌. ಹವಾಲ್ದಾರ್‌ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಮುದಕವಿ, ಸಂಘದ ಧ್ಯೇಯೋದ್ದೇಶಗಳ ಕುರಿತು ಹೇಳಿದರು. ಹಿರಿಯ ನಾಗರಿಕರ ನೋವಿಗೆ ಸ್ಪಂದಿಸುವಂತೆ ವಿನಂತಿಸಿದರು.

ಸಂಘದ ಕಾರ್ಯದರ್ಶಿ ಅಶೋಕ ಮಳಗಲಿ, ಸಂಘಟನೆ ಇಲ್ಲದಿದ್ದರೆ ಬೇಡಿಕೆಗಳು ಈಡೇರುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ತಿಳಿಸಿದರು. ರಾಮು ತಟಪತಿ, ಉಪಾಧ್ಯಕ್ಷ ಎಸ್‌.ಜಿ. ಸಿದ್ನಾಳ, ಜಿಲ್ಲಾ ಘಟಕದ ಅಧ್ಯಕ್ಷ ಡಾ. ಗೊಮಾಡಿ, ರಾಜ್ಯ ಘಟಕದ ಖಜಾಂಚಿ ಪ್ರಸಾದ ಹೀರೇಮಠ ಮಾತನಾಡಿದರು.

ಎಸ್‌.ಸಿ. ಪಟ್ಟಣ, ಆರ್‌.ಎಂ.ಗುಮ್ಮಗೊಳ, ಬಿ.ಎಂ.ಹವಾಣಿ, ಸಿ.ಖಿ. ಗುರುನಗೌಡರ, ಬಿ.ಪಿ.ರಣಗಟ್ಟಿಮಠ, ಬಿ.ಜಿ.ಮಠದ, ಮೋಹನ ಸಕ್ರಿ, ಆರ್‌.ಎಂ. ಚೌಲಿಗೇರ ಅವರನ್ನು ಸನ್ಮಾನಿಸಲಾಯಿತು. ಆರ್‌.ಎಂ. ಚಲವಾದಿ, ಎಸ್‌.ಎಸ್‌. ಸವದತ್ತಿ, ಎಂ.ಬಿ. ಮಡಿವಾಳರ, ವಿ.ಎಸ್‌. ಕರ್ಕಿ, ಐ.ಎಂ. ಬೊರಣ್ಣವರ ಉಪಸ್ಥಿತರಿದ್ದರು. ಶಂಕರ ಮೈಲಾರಿ ಪ್ರಾರ್ಥನೆ ಗೀತೆ ಹಾಡಿದರು. ವಿ.ಬಿ.ಮಡಿವಾಳ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ