ಆ್ಯಪ್ನಗರ

ಕೂದಲಿನಿಂದ ಚಕ್ಕಡಿ, ಟ್ರ್ಯಾಕ್ಟರ್‌ ಎಳೆದ ಶೂರರು

ಬೈಲಹೊಂಗಲ: ಸಂಗೊಳ್ಳಿಯಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿರುವ ರಾಯಣ್ಣನ ಉತ್ಸವ ಕಾರ್ಯಕ್ರಮದಲ್ಲಿ ಸಹೋದರರಿಬ್ಬರ ಸಾಹಸ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ...

Vijaya Karnataka 14 Jan 2019, 5:00 am
ಬೈಲಹೊಂಗಲ : ಸಂಗೊಳ್ಳಿಯಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿರುವ ರಾಯಣ್ಣನ ಉತ್ಸವ ಕಾರ್ಯಕ್ರಮದಲ್ಲಿ ಸಹೋದರರಿಬ್ಬರ ಸಾಹಸ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Vijaya Karnataka Web BEL-13HTP2


ಯಲ್ಲಪ್ಪ ಯಮನಪ್ಪ ಕುರಿ (ಅರಗಂಜಿ) ಏಳು ಚಕ್ಕಡಿಗಳನ್ನು ತನ್ನ ಕೂದಲಿನಿಂದ ಒಂದು ಕಿ.ಮೀ.ವರೆಗೆ ಎಳೆದು ಸಾಹಸ ಪ್ರದರ್ಶಿಸಿದರು. ಇವರ ಸಹೋದರ ಬಸವರಾಜ ಯಮನಪ್ಪ ಕುರಿ ಟ್ರ್ಯಾಕ್ಟರ್‌ ಮತ್ತು ಮೂರು ಚಕ್ಕಡಿಗಳನ್ನು ಕೂದಲಿನಿಂದ ಎಳೆದು ವಿಸ್ಮಯಗೊಳಿಸಿದರು. ಇವರ ಶಕ್ತಿ ಪ್ರದರ್ಶನ ನೋಡಲು ಜನಸಾಗರವೇ ನೆರೆದಿತ್ತು.

ಸಂಗೊಳ್ಳಿಯ ಈ ಸಹೋದರರು ಸರತಿಯಂತೆ ತಮ್ಮ ಶಕ್ತಿ ಪ್ರದರ್ಶಿಸಿ ಭೇಷ್‌ ಎನಿಸಿಕೊಂಡರು. ಜನರು ಸಿಳ್ಳೆ, ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ''ಇವರಿಗೆ ಜಿಲ್ಲಾಡಳಿತ ಸ್ವಲ್ಪ ಹಣ ಮಾತ್ರ ನೀಡುತ್ತಿದೆ. ಕನಿಷ್ಠ 25 ಸಾವಿರ ರೂ. ಬಹುಮಾನ ಮತ್ತು ಪ್ರಮಾಣ ಪತ್ರ ನೀಡಬೇಕು'', ಎಂದು ರಾಯಣ್ಣನ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಎಸಿ ಶಿವಾನಂದ ಭಜಂತ್ರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ತಾಪಂ ಇಒ ಸಮೀರ ಮುಲ್ಲಾ, ಜಿಪಂ ಸದಸ್ಯ ಅನಿಲ ಮೇಕಲಮರಡಿ, ಬಸವರಾಜ ಕೊಡ್ಲಿ, ಬಸವರಾಜ ಕಮತ, ಗೌಸಸಾಬ ಬುಡ್ಡೇಮುಲ್ಲಾ, ಮಲ್ಲಿಕಾರ್ಜುನ ಕುಡೊಳ್ಳಿ, ಅದೃಶ್ಯಪ್ಪ ಮಾಯನ್ನವರ, ಗಂಗಪ್ಪ ಕುರಿ, ಉಮೇಶ ಲಾಳ, ಅರುಣ ಯಲಿಗಾರ, ಸುನೀಲ ಕುಲಕರ್ಣಿ, ಪಿಡಿಒ ಮಮತಾಜ ಛಬ್ಬಿ, ಶಿದ್ಲಿಂಗಯ್ಯಾ ವಕ್ಕುಂದಮಠ, ಮಹಾಂತೇಶ ಬೆಣ್ಣಿ, ಮಹೇಶ ಹಿರೇಮಠ, ಮಲ್ಲಪ್ಪ ವಾರದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ